ಅಭಿಪ್ರಾಯ / ಸಲಹೆಗಳು

ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣ

ದಿನಾಂಕ: 05-05-2021 ರಂದು ವಿರಾಜಪೇಟೆ ತಾಲ್ಲೂಕು ತಹಸೀಲ್ದಾರ್‍ ರವರು ‍ಫ್ಲೈಯಿಂಗ್ ಸ್ಕ್ವಾಡ್ ಕರ್ತವ್ಯದಲ್ಲಿದ್ದು ಸಾರ್ವಜನಿಕರು ಕೋವಿಡ್‍-19 ಸಾಂಕ್ರಾಮಿಕ ರೋಗ ಹರಡುವಿಕೆ ತಡೆಗಟ್ಟಲು ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿಗಳನ್ನು ಪಾಲನೆ ಮಾಡುತ್ತಿರುವ ಬಗ್ಗೆ ಪರಿಶೀಲನೆ ಮಾಡುವಾಗ ವಿರಾಜಪೇಟೆ ಪಟ್ಟಣದ ಬಂಗಾಳ ಬೀದಿ ಮಸೀದಿಯಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ ಅಜಮತ್ತುಲ್ಲಾ ಮತ್ತು ಇತರರು ಮಸೀದಿಯೊಳಗೆ ಮಾಸ್ಕ್‍ ಧರಿಸದೇ , ಸಾಮಾಜಿಕ ಅಂತರ ಕಾಪಾಡಿಕೊಳ‍್ಳದೇ ಇದ್ದು ಈ ಬಗ್ಗೆ ನೀಡಿದ ದೂರಿನ ಮೇರೆ ವಿರಾಜಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

            ದಿನಾಂಕ: 05-05-2021 ರಂದು ವಿರಾಜಪೇಟೆ ತಾಲ್ಲೂಕು ಬಿ.ಶೆಟ್ಟಿಗೇರಿ  ಗ್ರಾಮದ  ನಿವಾಸಿ  ವಿ.ಕೆ ವಿಜು ಎಂಬುವವರು  ಅವರ  ಅಂಗಡಿಯ  ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಮಾರಾಟ  ಮಾಡುತ್ತಿದ್ದ ಪ್ರಕರಣವನ್ನು ವಿರಾಜಪೇಟೆ ಗ್ರಾಮಾಂತರ  ಠಾಣೆ ಪಿಎಸ್‍ಐ ಬೋಜಪ್ಪ  ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.

ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣ

                ದಿನಾಂಕ: 05-05-2021 ರಂದು ವಿರಾಜಪೇಟೆ ತಾಲ್ಲೂಕು ಬಿಟ್ಟಂಗಾಲ  ಗ್ರಾಮದ ನಿವಾಸಿ ಬಬೀನ್ ಎಂಬುವವರು ಕೋವಿಡ್‍-19 ಸಾಂಕ್ರಾಮಿಕ ರೋಗ ಹರಡುವಿಕೆ ತಡೆಗಟ್ಟಲು ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿ ಉಲ್ಲಂಘಿಸಿ ಅವರ ಮನೆಯ ಬಳಿ ಸಾರ್ಜನಿಕರಿಗೆ ಕೋಳಿ ಮಾರಾಟ ಮಾಡುತ್ತಿದ್ದ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ಧಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

                ದಿನಾಂಕ: 05-05-2021 ರಂದು ಮಡಿಕೇರಿ ತಾಲ್ಲೂಕು ಕರ್ಣಂಗೇರಿ ಗ್ರಾಮದ ನಿವಾಸಿ  ಸುಬ್ರಮಣಿ ಎಂಬುವವರು ಅವರ ಮನೆಯ ಅಂಗಳದಲ್ಲಿ ಮದ್ಯವನ್ನು ಇಟ್ಟುಕೊಂಡು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಮಾರಾಟ  ಮಾಡುತ್ತಿದ್ದ ಪ್ರಕರಣವನ್ನು ಮಡಿಕೇರಿ ಗ್ರಾಮಾಂತರ ಠಾಣೆ ಪಿ.ಐ ರವಿಶಂಕರ್  ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.

ಇತ್ತೀಚಿನ ನವೀಕರಣ​ : 06-05-2021 01:32 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ