ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ ಪತ್ತೆ, ಆರೋಪಿಗಳ ಬಂಧನ:

            ದಿನಾಂಕ:13/02/2021 ರಂದು  ಗೋಣಿಕೊಪ್ಪ ಠಾಣಾ ವ್ಯಾಪ್ತಿಯ ಧನುಗಾಲ ಗ್ರಾಮದ ನಿವೃತ್ತ  ಶಿಕ್ಷಕಿ ಶ್ರೀಮತಿ ನಂಜಮ್ಮರವರ ಮನೆಯಲ್ಲಿ ಹಾಡುಹಗಲೇ ಕಳ್ಳತನ ಮಾಡಿದ್ದ   ಆರೋಪಿತರನ್ನು ಪತ್ತೆಹಚ್ಚಿ ಬಂಧಿಸುವಲ್ಲಿ  ಗೋಣಿಕೊಪ್ಪ ಪೊಲೀಸ್ ವೃತ್ತ ನಿರೀಕ್ಷಕರು ಮತ್ತು ಸಿಬ್ಬಂದಿಯವರು ಯಶಸ್ವಿಯಾಗಿರುತ್ತಾರೆ.

            ಮಾಯಮುಡಿ ಧನುಗಾಲ ಗ್ರಾಮದ ನಿವೃತ್ತಿ ಶಿಕ್ಷಕಿ ಶ್ರೀಮತಿ ನಂಜಮ್ಮರವರು ದಿನಾಂಕ:13/02/2021 ರಂದು ಬೆಳಿಗ್ಗೆ 7.30 ಗಂಟೆಗೆ ಮನೆಗೆ ಬೀಗಹಾಕಿಕೊಂಡು ಚಿಕಿತ್ಸೆ ಬಗ್ಗೆ ಮೈಸೂರಿಗೆ ಹೋಗಿದ್ದು, ಸಂಜೆ ಮನೆಗೆ ವಾಪಾಸ್ಸು ಬಂದು ನೋಡುವಾಗ್ಗೆ ಮನೆಯ ಹೆಂಚನ್ನು ತೆಗೆದು ಯಾರೋ ಕಳ್ಳರು ಒಳನುಗ್ಗಿ ಗಾಡ್ರೇಜ್ನಲ್ಲಿಟ್ಟಿದ್ದ 50 ಸಾವಿರ ನಗದು ಹಣ ಮತ್ತು ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಸಂಬಂಧ ಶ್ರೀಮತಿ ನಂಜಮ್ಮರವರು ನೀಡಿದ ಪುಕಾರಿಗೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಮೊ.ಸಂ.34/2021 ಕಲಂ:454, 380 ಐಪಿಸಿ ರೀತ್ಯ ಪ್ರಕರಣ ದಾಖಲಾಗಿ ತನಿಖೆಯನ್ನು ಕೈಗೊಳ್ಳಲಾಗಿತ್ತು.

            ವಿರಾಜಪೇಟೆ ಉಪ-ವಿಭಾಗದ ಮಾನ್ಯ ಪೊಲೀಸ್ ಉಪ-ಅಧೀಕ್ಷಕರವರ ಮಾರ್ಗದರ್ಶನದಲ್ಲಿ ಸಿಪಿಐ ಗೋಣಿಕೊಪ್ಪ ಮತ್ತು ಸಿಬ್ಬಂದಿಯವರ ತಂಡ ದಿನಾಂಕ:04/10/2021 ರಂದು ಒಬ್ಬ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಹಾಗೂ ಇಬ್ಬರು ಆರೋಪಿತರನ್ನು ಪತ್ತೆ ಹಚ್ಚಿ ಕಳುವಾದ 3 ಚಿನ್ನದ ಉಂಗುರ, 2 ಚಿನ್ನದ ಬಳೆಗಳು, ಒಂದು ಚಿನ್ನದ ಸರ, ಒಂದು ಚಿನ್ನದ ಪತ್ತಾಕ್ ಸೇರಿ ಒಟ್ಟು 39 ಗ್ರಾಂ ಚಿನ್ನಾಭರಣ ಹಾಗೂ ರೂ.1360/- ರೂ ನಗದು ಹಣ ಸೇರಿ ಒಟ್ಟು ರೂ.1,53,360/- ಮೌಲ್ಯದ ಸ್ವತ್ತುಗಳನ್ನು   ವಶಪಡಿಸಿಕೊಂಡಿರುತ್ತಾರೆ.         

ದಸ್ತಗಿರಿ ಮಾಡಲಾದ ಆರೋಪಿತರ ವಿವರ:-

  1. ಪಿ.ಆರ್.ದಿನೇಶ @ ದಿನು ತಂದೆ:ರಾಜು, ಪ್ರಾಯ 21 ವರ್ಷ, ಕೂಲಿ ಕೆಲಸ, ನಲ್ಲೂರು ಪೈಸಾರಿ, ನಲ್ಲೂರು ಗ್ರಾಮ, ಪೊನ್ನಂಪೇಟೆ ತಾಲ್ಲೂಕು.
  2. ಬಿ.ಬಿ.ಸುಬ್ರಮಣಿ @ ಸುಬ್ಬ @ ಅಯ್ಯಪ್ಪ, ತಂದೆ:ಬೋಜ ಪ್ರಾಯ 21 ವರ್ಷ, ಕೆ/ಅ ಸುಬ್ಬಯ್ಯರವರ ಲೈನ್ ಮನೆ,ಧನುಗಾಲ ಗ್ರಾಮ, ಮಾಯಮುಡಿ, ಪೊನ್ನಂಪೇಟೆ ತಾಲ್ಲೂಕು.

            ಈ ಪ್ರಕರಣದ ಪತ್ತೆ ಕಾರ್ಯಾಚರಣೆಯಲ್ಲಿ ಗೋಣಿಕೊಪ್ಪ ವೃತ್ತ ನಿರೀಕ್ಷಕರಾದ ಎಸ್.ಎನ್.ಜಯರಾಮ್, ಎಎಸ್ಐ ಸುಬ್ರಮಣಿ, ಎಎಸ್ಐ ಉದಯಕುಮಾರ್ ಹಾಗೂ ಸಿಬ್ಬಂದಿಯವರಾದ ಸುರೇಂದ್ರ, ಪಿ.ಎ.ಮಹಮದ್ ಅಲಿ, ಅಬ್ದುಲ್ ಮಜೀದ್, ಕೃಷ್ಣಮೂತರ್ಿ, ಯೊಗೇಶ್, ಲೋಕೇಶ್, ಹೇಮಲತಾ ರೈ ಮತ್ತು ಚಾಲಕರಾದ ಬಷೀರ್ರವರು ಭಾಗವಹಿಸಿರುತ್ತಾರೆ. ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಲಾಗಿದೆ.

 ರಸ್ತೆ ಅಪಘಾತ ಪ್ರಕರಣ

            ದಿನಾಂಕ: 03-10-2021 ರಂದು ಮಡಿಕೇರಿ ನಗರದ ಜಿ.ಟಿ ರಸ್ತೆಯ ಅಶ್ವಿನಿ ಆಸ್ಪತ್ರೆ ಜಂಕ್ಷನ್‌ ಬಳಿ ಕೆಎ-09-ಎಂಎಫ್-2132‌ ರ ಕಾರನ್ನು ಅದರ ಚಾಲಕಿ ಅತಿವೇಗ ಮತ್ತು ಅಜಾಗರೂಕತೆಯಿಂದ   ಚಾಲನೆ ಮಾಡಿಕೊಂಡು ಹೋಗಿ ಕೆಎ-12-ಎಸ್‌-4467 ರ ಬೈಕ್‌ ಗೆ ಡಿಕ್ಕಿಪಡಿಸಿದ ಪರಿಣಾಂ ಬೈಕ್‌  ಸವಾರ ಗಾಯಗೊಂಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಮಡಿಕೇರಿ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

            ದಿನಾಂಕ: 04-10-2021 ರಂದು ಸೋಮವಾರಪೇಟೆ ತಾಲ್ಲೂಕು ಅರೆಹಳ್ಳಿ ಗ್ರಾಮದ ಪೈಸಾರಿ ಜಾಗದಲ್ಲಿ ಕೂಡ್ಲೂರು ಗ್ರಾಮದ ನಿವಾಸಿ ಆನಂದ್‌ ಎಂಬುವವರು ಅಕ್ರಮವಾಗಿ ಮಂಟಪ ನಿರ್ಮಾಣ ಮಾಡುತ್ತಿದ್ದುದನ್ನು ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಹೋಗಿ ತೆರವು ಗೊಳಿಸುತ್ತಿದ್ದಾಗ ಕಾಂತರಾಜು ಎಂಬುವವರಿಗೆ ಅವಾಚ್ಯ ಪದಗಳಿಂದ ಬೈದು ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಶನಿವಾರಸಂತೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

                ದಿನಾಂಕ: 04-10-2021 ರಂದು ಸೋಮವಾರಪೇಟೆ ತಾಲ್ಲೂಕು ದೊಡ್ಡ ಅಬ್ಬೂರು ಗ್ರಾಮದ ನಿವಾಸಿ  ಮಹಿಳೆಯೊಬ್ಬರು ಅವರ ಮನೆಯ ಹೊರಭಾಗದಲ್ಲಿ ಅಕ್ರಮವಾಗಿ  ಮದ್ಯವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯ ಸೇವನೆಗೆ ಅವಕಾಶ ಮಾಡುತ್ತಿದ್ದ ಪ್ರಕರಣವನ್ನು ಸೋಮವಾರಪೇಟೆ ಠಾಣೆ ಪೊಲೀಸರು ಪತ್ತೆ ಮಾಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.

 

ಇತ್ತೀಚಿನ ನವೀಕರಣ​ : 05-10-2021 01:22 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080