ಅಭಿಪ್ರಾಯ / ಸಲಹೆಗಳು

ಮಹಿಳೆ ಕಾಣೆ ಪ್ರಕರಣ

ದಿನಾಂಕ 01/01/2021ರಂದು ಕುಶಾಲನಗರ ಬಳಿಯ ತೊರೆನೂರು ನಿವಾಸಿ ನಾಗಾಚಾರಿ ಎಂಬವರು ಮನೆಯಿಂದ ಕೆಲಸಕ್ಕೆಂದು ಹೊರಗೆ ಹೋಗಿ ಮನೆಗೆ ಮರಳಿದಾಗ ಮನೆಯಲ್ಲಿದ್ದ ಅವರ ಪತ್ನಿ ಮಂಜುಳಾ ಎಂಬವರು ಮನೆಯಲ್ಲಿಲ್ಲದೆ ಕಾಣೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಮನುಷ್ಯ ಕಾಣೆ ಪ್ರಕರಣ

ದಿನಾಂಕ 27/10/2021ರಂದು ಶ್ರೀಮಂಗಲ ಬಳಿಯ ಬಾಡಗರಕೇರಿ ನಿವಾಸಿ ಶರತ್‌ಕುಮಾರ್‌ ಎಂಬವರ ತಂದೆ ಲಕ್ಷ್ಮಣ ಎಂಬವರು ಮನೆಯಿಂದ ಯಾರಿಗೂ ಹೇಳದೆ ಎಲ್ಲಿಗೋ ಹೋಗಿದ್ದು ಇದುವರೆಗೂ ಮರಳಿ ಬಂದಿರುವುದಿಲ್ಲ ಎಂದು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ರಸ್ತೆ ಅಪಘಾತ

ದಿನಾಂಕ 04/01/202೨ರಂದು ಬಾಳೆಲೆ ಬಳಿಯ ದೇವನೂರು ನಿವಾಸಿ ಸುಬ್ಬಯ್ಯ ಎಂಬವರು ಅವರ ಜೀಪಿನಲ್ಲಿ ಮೈಸೂರಿನಿಂದ ಗೋಣಿಕೊಪ್ಪಕ್ಕೆ ಬರುತ್ತಿರುವಾಗ ತಿತಿಮತಿ ಬಳಿ ಗೋಣಿಕೊಪ್ಪ ಕಡೆಯಿಂದ ಒಂದು ಕಾರನ್ನು ಅದರ ಚಾಲಕ ಸುನೀಶ್‌ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸುಬ್ಬಯ್ಯನವರ ಜೀಪಿಗೆ ಡಿಕ್ಕಿಪಡಿಸಿದ ಪರಿಣಾಮ ಸುಬ್ಬಯ್ಯನವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಕಳವು ಪ್ರಕರಣ

ವಿರಾಜಪೇಟೆ ಬಳಿಯ ಮಾಕುಟ್ಟ ಅರಣ್ಯ ವಲಯದ ಕೂರಾಟ್‌ ಶಾಖೆಯಲ್ಲಿ ಅರಣ್ಯ ಇಲಾಖೆಯ ವತಿಯಿಂದ ಅಖಿಲ ಭಾರತ ಹುಲಿ ಗಣತಿಗಾಗಿ ಆಳವಡಿಸಿದ್ದ ಎರಡು ಕ್ಯಾಮೆರಾಗಳನ್ನು ದಿನಾಂಕ 30/12/2021 ರಿಂದ 02/02/2022ರ ನಡುವೆ ಯಾರೋ ಕಳ್ಳರು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  

ಇತ್ತೀಚಿನ ನವೀಕರಣ​ : 05-01-2022 05:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080