ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ ಪತ್ತೆ, ಆರೋಪಿಗಳ ಬಂಧನ;

ಕೊಡಗು ಜಿಲ್ಲೆ ವಿರಾಜಪೇಟೆ ತಾಲೊಕು ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕರಡಿಗೋಡು ಗ್ರಾಮದ ಇವಾಲ್ ಬ್ಯಾಕ್ ರೆಸಾರ್ಟ್ ನಲ್ಲಿ  ನಡೆದಿದ್ದ ಕಳುವು ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಮಡಿಕೇರಿ ನಗರ ಪೊಲೀಸ್ ವೃತ್ತ ನಿರೀಕ್ಷಕರು, ಸಿದ್ದಾಪುರ ಪೊಲೀಸ್ ಠಾಣಾ ಪಿಎಸ್ಐ ಮತ್ತು ಸಿಬ್ಬಂದಿಯವರು  ಹಾಗೂ ಕೊಡಗು ಡಿ.ಸಿ.ಆರ್.ಬಿ ಘಟಕದ ಸಿಬ್ಬಂದಿಯವರು ಯಶಸ್ವಿಯಾಗಿದ್ದಾರೆ.

            ದಿನಾಂಕ 01-04-2022 ರಂದು ಮುಂಬೈನಿಂದ ಬಾಲಕೃಷ್ಣ ಭಂಡಾರಿ ಮತ್ತು ಅವರ ಸಂಸಾರದವರು ಸಿದ್ದಾಪುರದ ಕರಡಿಗೋಡಿನ ಇವಾಲ್ ಬ್ಯಾಕ್ ರೆಸಾರ್ಟ್ ಗೆ ಬಂದು ಕೊಠಡಿಗಳನ್ನು ಪಡೆದುಕೊಂಡು, ಒಡವೆ ಮತ್ತು ಹಣವನ್ನು ಕೊಠಡಿಯಲ್ಲಿದ್ದ ಸೇಫ್ ಲಾಕರ್ ನಲ್ಲಿ ಇಟ್ಟಿದ್ದು, ಅವರುಗಳು ಊಟ ಮುಗಿಸಿ ರಾತ್ರಿ ಕೊಠಡಿಗೆ ಬಂದು ನೋಡುವಾಗ್ಗೆ ಸೇಪ್ ಲಾಕರ್ ಕಳುವಾಗಿದ್ದು, ಅದರಲ್ಲಿದ್ದ ಐಪ್ಯಾಡ್, ವಜ್ರಾಭರಣಗಳು ಮತ್ತು ನಗದು ಹಣ ಮತ್ತು ಇತರ ದಾಖಲಾತಿಗಳು ಕಳುವಾಗಿರುವುದಾಗಿ ಪುಕಾರು ನೀಡಿದ ಮೇರೆಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮಡಿಕೇರಿ ವೃತ್ತ ನಿರೀಕ್ಷಕರು ತನಿಖೆ ಕೈಗೊಂಡಿದ್ದರು.

  ಪ್ರಕರಣದ ಆರೋಪಿಗಳ ಪತ್ತೆಯ ಬಗ್ಗೆ ಮಡಿಕೇರಿ ಉಪವಿಭಾಗ ಡಿವೈ.ಎಸ್‍.ಪಿ ರವರ ನೇತೃತೃದಲ್ಲಿ ಮಡಿಕೇರಿ ನಗರ ವೃತ್ತದ ಸಿ.ಪಿ.ಐ , ಡಿ.ಸಿ.ಆರ್.ಬಿ  ಪೊಲೀಸ ನಿರೀಕ್ಷಕರು, ಸಿದ್ದಾಪುರ ಠಾಣಾ ಪಿಎಸ್ಐ ಮತ್ತು ಸಿಬ್ಭಂದಿಗಳನ್ನೊಳಗೊಂಡ ತಂಡಗಳನ್ನು ರಚಿಸಿ ಮಾ‍ರ್ಗದರ್ಶನ ನೀಡಲಾಗಿತ್ತು.

  ಆರೋಪಿಗಳ ಬಗ್ಗೆ ಮಾಹಿತಿಯನ್ನು ಕಲೆ ಹಾಕಿದ ಮಡಿಕೇರಿ ನಗರ ವೃತ್ತ ಮತ್ತು ಡಿ.ಸಿ.ಆರ್.ಬಿ ವಿಭಾಗದ ಪೊಲೀಸ್‍ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಈ ಹಿಂದೆ ರೆಸಾರ್ಟ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಕೆ.ಎಂ. ಪ್ರದೀಪ್, ತಂದೆ ಕೆ.ಜಿ. ಮಣಿ ಪ್ರಾಯ 31 ವರ್ಷ, ವುಡ್ ಸ್ಟಾಕ್ ವಿಲ್ಲಾದಲ್ಲಿ ಡಿಪಾರ್ಟ ಮೆಂಟ್ ಇನ್ ಚಾರ್ಜ್, ಕಾಮಾನು ಗೇಟ್ ಹತ್ತಿರ ಮಡಿಕೇರಿ. ಸ್ವಂತ ಊರು ಹೈಸ್ಕೂಲ್ ಪೈಸಾರಿ ಗುಹ್ಯ ಗ್ರಾಮ ವಿರಾಜಪೇಟೆ. ತಾಲೂಕು. ಮತ್ತು ಕೆ.ಎಸ್ ಶರತ್, ತಂದೆ ಕೆ.ಜಿ ಸದನ್, ಪ್ರಾಯ 30 ವರ್ಷ, ಚಾಲಕ ವೃತ್ತ ವಾಸ ಹೈಸ್ಕೂಲ್ ಪೈಸಾರಿ ಗುಹ್ಯ ಗ್ರಾಮ ವಿರಾಜಪೇಟೆ ತಾಲೂಕು. ಇವರನ್ನು ವಶಕ್ಕೆ ಪಡೆದು (1). ಒಂದು  ಜಖಂ ಗೊಂಡ ಐಪ್ಯಾಡ್ ಸುಮಾರು ₹. 50,000  (2). ಒಂದು ಡೈಮಂಡ್ ಬ್ರಾಸ್ ಲೈಟ್ ಸುಮಾರು 5 ಲಕ್ಷ ರೂ. (3). ಒಂದು ಡೈಮೆಂಡ್ ರಿಂಗ್ ₹. 80,000 (4) .ಆರೋಪಿ ಕೆ.ಎಂ. ಪ್ರದೀಪ್ ಬಳಿ ಇದ್ದ ನಗದು ಹಣ ₹. 45,000 (5). ಆರೋಪಿ ಕೆ.ಎಸ್.ಶರತ್ ಬಳಿ ಇದ್ದ ನಗದು ಹಣ  ₹. 35,000 (6). ಆರೋಪಿಗಳು ಕೃತ್ಯಕ್ಕೆ ಬಳಸಿದ ಮೋಟಾರ್ ಬೈಕ್ ಕೆಎ12ಕೆ9014 (7). ಆರೋಪಿಗಳು ಕೃತ್ಯಕ್ಕೆ ಬಳಸಿದ ವಾಗನರ್ ಕಾರ್ ಕೆಎ05 ಎಂಬಿ 6920  ಸೇರಿದಂತೆ ಆರೋಪಿಗಳಿಂದ ಒಟ್ಟು ಹತ್ತು ಲಕ್ಷ ರೂ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

       ಈ ಪ್ರಕರಣದ ಪತ್ತೆ ಕಾರ್ಯಚರಣೆಯಲ್ಲಿ ಮಡಿಕೇರಿ ಉಪವಿಭಾಗದ ಡಿವೈ.ಎಸ್‍.ಪಿ ಗಜೇಂದ್ರ ಪ್ರಸಾದ್ ರವರ ನೇತೃತೃದಲ್ಲಿ ಮಡಿಕೇರಿ ನಗರ ವೃತ್ತ ಸಿ.ಪಿ.ಐ ವೆಂಕಟೇಶ್ ಪಿ.ವಿ, ಡಿ.ಸಿ.ಆರ್.ಬಿ ಪೊಲೀಸ್ ನಿರೀಕ್ಷಕರಾದ ಐ.ಪಿ. ಮೇದಪ್ಪ, ಸಿದ್ದಾಪುರ ಪೊಲೀಸ್ ಠಾಣೆಯ ಪಿಎಸ್ಐ ಮೋಹನ್ ರಾಜ್, ಪಿ. ಪ್ರೋ. ಪಿ.ಎಸ್.ಐ ಪ್ರಮೋದ್, ಎ.ಎಸ್.ಐ ತಮ್ಮಯ್ಯ, ಮಡಿಕೇರಿ ನಗರ ವೃತ್ತ ಮತ್ತು ಡಿ.ಸಿ.ಆರ್‍ ಬಿ ವಿಭಾಗದ ಸಿಬ್ಬಂದಿಗಳಾದ ಚರ್ಮಣ, ಸಿ.ವಿ, ಕಿರಣ್ ಎ.ವಿ. ದೇವರಾಜು,  ಬೆಳ್ಳಿಯಪ್ಪ ಪಿ. ರತನ್ ಟಿ.ಜೆ, ಲಕ್ಮೀಕಾಂತ್, ವಸಂತ್ ಕುಮಾರ್ , ಹೆಚ್.ಕೆ, ಭರತ್, ಹರೀಶ್, ಶಿವಕುಮಾರ್, ಮಲ್ಲಪ್ಪ ಮುಶಿಗೇರಿ, ದಿನೇಶ್ ಕೆ.ಕೆ, ನಾಗರಾಜ್ ಕಡಗನ್ನನವರ್, ರುದ್ರಪ್ಪ. ಜಿ. ಯೋಗೇಶ್ ಕುಮಾರ್, ನಿರಂಜನ್, ಸುರೇಶ್, ವಸಂತ್ ರವರು ಭಾಗವಹಿಸಿದ್ದು, ಇವರ ಕಾರ್ಯ ವೈಖರಿಯನ್ನು ಶ್ಲಾಘಿಸಲಾಗಿದೆ.

ಸೂಚನೆ:-  ಕೊಡಗು ಜಿಲ್ಲೆಯಲ್ಲಿ ಇತ್ತಿಚ್ಚಿನ ದಿನಗಳಲ್ಲಿ ರೆಸಾರ್ಟ್ ಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು,  ರೆಸಾರ್ಟ್ ನಲ್ಲಿ ಕೆಲಸ ಮಾಡಲು ಸಿಬ್ಬಂದಿಗಳನ್ನು ನೇಮಕ ಮಾಡುವ ಸಮಯದಲ್ಲಿ ಸಿಬ್ಬಂದಿಗಳ ಪೂರ್ವಪರ ವಿಚಾರಣೆ ಮಾಡಿ ಕೆಲಸಕ್ಕೆ ನೇಮಕ ಮಾಡುವುದು. ರೆಸಾರ್ಟ್ ಮಾಲೀಕರು ರೆಸಾರ್ಟ್ ಗಳಿಗೆ  ಅತ್ಯುತ್ತಮವಾದ ಸುಸ್ಥಿತಿಯಲ್ಲಿರುವ ಸಿ.ಸಿ ಕ್ಯಾಮಾರವನ್ನು ರೆಸಾರ್ಟ್ ಸುತ್ತಮತ್ತ ಹಾಗೂ ಪ್ರತಿಯೊಂದು ಕಾಟೇಜ್ಗಳಿಗೆ ಪ್ರತ್ಯೇಕ, ಪ್ರತ್ಯೇಕವಾಗಿ ಆಳವಡಿಸಿಕೊಳ್ಳುವುದು. ರೆಸಾರ್ಟ್ ಸುತ್ತ  ಕಾಂಪೌಂಡು ನಿರ್ಮಿಸಿ  ಸೂಕ್ತ ಭದ್ರತೆ (ಸೆಕ್ಯೂರಿಟಿ) ಯನ್ನು ಒದಗಿಸುವುದು. ರೆಸಾರ್ಟ್ ಗೆ ಹೋಗಿ ಬರುವ ಜನರ ಬಗ್ಗೆ ನಿಗಾ ಇಡುವುದು ರೆಸಾರ್ಟ್ ಗಳಿಗೆ ಬರುವಂತಹ ವಿಸಿಟರ್ಸ್ ಗಳು ತಂಗುವ ಕೊಠಡಿಗಳನ್ನು ಭದ್ರಪಡಿಸಿಕೊಳ್ಳುವ ಬಗ್ಗೆ ಸೂಕ್ತ ತಿಳುವಳಿಕೆಯನ್ನು ನೀಡಿ, ರೆಸಾರ್ಟ್ ಮಾಲೀಕರುಗಳು ಮೇಲ್ಕಂಡ ಅಂಶಗಳನ್ನು ಪಾಲನೆ ಮಾಡಲು ಕೋರಿದೆ.

ಹಲ್ಲೆ ಪ್ರಕರಣ

            ದಿನಾಂಕ: 03-04-2022 ರಂದು ಕುಶಾಲನಗರ ಪಟ್ಟಣದ ಮಹಾರಾಜ ಬಾರ್‍ ಮತ್ತು ರೆಸ್ಟೋರಂಟ್‍ ಗೆ ಮಡಿಕೇರಿ ನಿವಾಸಿ ಸುಬ್ಬಯ್ಯ ಮತ್ತು ಕಾರ್ತಿಕ್‍ ಎಂಬುವವರು ಸ್ನೇಹಿತರೊಂದಿಗೆ ಊಟ ಮಾಡುತ್ತಿರುವಾಗ 4 ಜನ ಅಪರಿಚಿತ ವ್ಯಕ್ತಿಗಳುಬಿಯರ್‍ ಬಾಟಲಿಯಿಂದ ತಲೆಗೆ ಹಲ್ಲೆ ಮಾಡಿ ಗಾಯಪಡಿಸಿ ಕಾರು ಸಂಖ್ಯೆ ಕೆಎ-12-ಪಿ-3212 ರಲ್ಲಿ ಹೊರಟು ಹೋಗಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಕುಶಾಲನಗರ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

            ದಿನಾಂಕ: 02-04-2022 ರಂದು ಸೋಮವಾರಪೇಟೆ ತಾಲ್ಲೂಕು ವಳಗುಂದ ಗ್ರಾಮದ ನಿವಾಸಿ ಅನುಕುಮಾರ್‍ ಎಂಬುವವರಿಗೆ ಅಬ್ಬೂರುಕಟ್ಟೆ ಗ್ರಾಮದ ನಿವಾಸಿಗಳಾದ ದೀಪು ಮತ್ತು ದಿನೇಶ್‍ ಎಂಬುವವರು ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡುವ ಉದ್ದೇಶದಿಂದ ಬೀಯರ್‍ ಬಾಟಲಿಯಿಂದ ಹಲ್ಲೆ ಮಾಡಿ ಗಾಯಪಡಿಸಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ ಪ್ರಕರಣ

            ದಿನಾಂಕ: 02-04-2022 ರಂದು ಕುಶಾಲನಗರ ತಾಲ್ಲೂಕು ಅಭ್ಯತ್‍ಮಂಗಲ ಗ್ರಾಮದ ಬಳಿ ಮುಖ್ಯ ರಸ್ತೆಯಲ್ಲಿ ಕೆಎ-41-ಇಬಿ-480 ರ ಬೈಕನ್ನು ಸವಾರ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುರುಗಡೆಯಿಂದ ಬರುತ್ತಿದ್ದ ಕೆಎ-12-ಎಸ್‍-1192 ರ ಬೈಕ್ ಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್ ಸವಾರ ವಿನೀಶ್‍ ಎಂಬುವವರು ತೀವ್ರ ಗಾಯಗೊಂಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಳವು ಪ್ರಕರಣ

            ದಿನಾಂಕ: 03-04-2022 ರಂದು ವಿರಾಜಪೇಟೆ ತಾಲ್ಲೂಕು ಕರಡ ಗ್ರಾಮದ ನಿವಾಸಿ ಬಿಂದು ಎಂಬುವವರ ಮನೆಗೆ ಹಾಕಿದ್ದ ಬೀಗವನ್ನು ಯಾರೋ ಕಳ್ಳರು ತೆಗೆದು ಒಳನುಗ್ಗಿ ಗಾಡ್ರೆಜ್ ‍ಬೀರುವಿನಿಂದ ₹. 60,000 ಮೌಲ್ಯದ ಚಿನ್ನಾಭರಣ ಮತ್ತು ಮೊಬೈಲ್ ಹ್ಯಾಂಡ್‍ ಸೆಟ್‍ ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 04-04-2022 07:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080