ಅಭಿಪ್ರಾಯ / ಸಲಹೆಗಳು

ಆನ್‍ಲೈನ್‍ ವಂಚನೆ ಪ್ರಕರಣ

          ಮಡಿಕೇರಿ ತಾಲ್ಲೂಕು ಕಾಟಕೇರಿ ಶಾಲಾ ಶಿಕ್ಷಕರೊಬ್ಬರು ಇನ್ಸ್ಟಾಗ್ರಾಂ ನಲ್ಲಿ Gadget Tech ಎಂಬ ಹೆಸರಿನ ಕಂಪನಿಯ ಜಾಹೀರಾತನ್ನು ನೋಡಿ ಕಡಿಮೆ ಬಲೆಗೆ ಆಪಲ್ ಕಂಪನಿಯ ಪೋನ್‍ , ವಾಚ್‍ ಮತ್ತು ಇಯರ್‍ ಫೋನ್‍  ಖರೀದಿಸಲು ಜಾಹೀರಾತಿನಲ್ಲಿ ನೀಡಿದ್ದ ಮೊಬೈಲ್ ಸಂಖ‍್ಯೆಯನ್ನು ಸಂಪರ್ಕಿಸಿ ಕಂಪನಿಯವರು ಹೇಳಿದಂತೆ ವಾಟ್ಸಪ್ ಮುಖಾಂತರ ವೈಯಕ್ತಿಕ ವಿವರ ಹಾಗೂ ಬ್ಯಾಂಕ್‍ ವಿವರಗಳನ್ನು ನೀಡಿದ್ದರು. ನಂತರ ಕಂಪನಿಯವರು ನೀಡಿದ ಸೂಚನೆಯಂತೆ ಹಂತ ಹಂತವಾಗಿ ಬೇರೆ ಬೇರೆ ಬ್ಯಾಂಕ್‍ ಖಾತೆಗಳಿಗೆ ಒಟ್ಟು ₹. 1,77,830 ಹಣವನ್ನು ಗೂಗಲ್‍ ಪೇ ಮುಖಾಂತರ ಪಾವತಿ ಮಾಡಿದ್ದು ಕಂಪನಿಯವರು ಇನ್ನೂ ಹೆಚ್ಚಿನ ಹಣ ಪಾವತಿಸಬೇಕೆಂದು ಕೇಳಿದಾಗ ಆನ್‍ ಲೈನ್ ಖರೀದಿಯಲ್ಲಿ ಮೋಸ ಹೋಗಿರುವ ಬಗ್ಗೆ ಸಂಶಯಗೊಂಡು ದಿನಾಂಕ 03-02-2022 ರಂದು ನೀಡಿದ ಪುಕಾರಿನ ಮೇರೆ ಕೊಡಗು ಸೈಬರ್ ಅಪರಾಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸಾರ್ವಜನಿಕರು ಆನ್ ಲೈನ್ ಮೂಲಕ ಎಲೆಕ್ಟ್ರಾನಿಕ್ ಅಥವಾ ಗೃಹೋಪಯೋಗಿ ವಸ್ತುಗಳು ಮತ್ತು ಉಪಯೋಗಿಸಿದ ವಾಹನ ಖರೀದಿಸಲು ಅಥವಾ ಮಾರಾಟ ಮಾಡಲು ಹೋಗಿ ವಂಚನೆಗೆ ಒಳಗಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಸಾರ್ವಜನಿಕರು ಆನ್ ಲೈನ್ ಮೂಲಕ ವಾಹನ ಮತ್ತು ಯಾವುದೇ ವಸ್ತಗಳನ್ನು ಖರೀದಿಸುವಾಗ ಕಂಪನಿಗಳ ಬಗ್ಗೆ ಅಥವಾ ಮಾರಾಟ ಮಾಡುವಾಗ ವ್ಯಕ್ತಿಗಳ ಬಗ್ಗೆ ಸರಿಯಾಗಿ ಪರಿಶೀಲಿಸಿಕೊಳ್ಳುವುದು. ಆನ್‍ ಲೈನ್ ಹಣಕಾಸು ವರ್ಗಾವಣೆ , ವ್ಯವಹಾರಗಳಿಗೆ ತಮ್ಮ ಬ್ಯಾಂಕ್‍ಗಳ  ಅಧಿಕೃತ ಅಪ್ಲಿಕೇಶನ್‍ ಗಳನ್ನು ಬಳಸಲು ಕೋರಲಾಗಿದೆ. ಯಾವುದೇ ಆನ್‍ಲೈನ್‍ ವ್ಯವಹಾರಗಳ ಸಂದರ್ಭದಲ್ಲಿ ಖರೀದಿ ಅಥವಾ ಮಾರಾಟಕ್ಕೆ ಅವಶ್ಯಕವಿರುವುದು ಹಣದ ವರ್ಗಾವಣೆ ವಿನಃ ವೈಯಕ್ತಿಕ ಮಾಹಿತಿಗಳಲ್ಲ. ಸಾರ್ವಜನಿಕರು  ತಮ್ಮ ವೈಯಕ್ತಿಕ ಮಾಹಿತಿ ಹಾಗೂ ಒಟಿಪಿ ಸಂಖ‍್ಯೆ, ಆಧಾರ್ ಸಂಖ‍್ಯೆ, ಪ್ಯಾನ್ ಸಂಖ್ಯೆ,, ಬ್ಯಾಂಕ್‍ ಖಾತೆಗಳ ಮಾಹಿತಿಗಳನ್ನು ಆನ್‍ಲೈನ್‍ ವ್ಯವಹರಣೆಯ ಸಂದರ್ಭದಲ್ಲಿ ನೀಡುವ ಅವಶ್ಯಕತೆ ಇರುವುದಿಲ್ಲ. ಯಾವುದೇ ರೀತಿಯ ವ್ಯವಹಾರಕ್ಕೆ ಇಂತಹ ವೈಯಕ್ತಿಕ ಮಾಹಿತಿಗಳನ್ನು ಅಪೇಕ್ಷಿಸಿದ ಸಂದರ್ಭದಲ್ಲಿ ದೂರವಾಣಿ ಅಥವಾ ಆನ್‍ಲೈನ್‍ ಮುಖಾಂತರ ಮಾಹಿತಿಗಳನ್ನು ನೀಡದೆ, ಖುದ್ದು ಸಂಬಂದಪಟ್ಟ (ಸರ್ಕಾರಿ/ಖಾಸಗಿ) ಸಂಸ್ಥೆಗಳಿಗೆ ಭೇಟಿ ನೀಡಿ ನೈಜತೆ ಪರಿಶೀಲಿಸಿಕೊಂಡು ವ್ಯವಹರಿಸಲು ಸಾರ್ವಜನಿಕರಲ್ಲಿ ಕೋರಲಾಗಿದೆ.

ರಸ್ತೆ ಅಪಘಾತ ಪ್ರಕರಣ

                ದಿನಾಂಕ: 02-02-2022 ರಂದು ಹೆಬ್ಬಾಲೆ ಗ್ರಾಮದ ಬಳಿ ಹೆದ್ದಾರಿ ರಸ್ತೆಯಲ್ಲಿ ಕೆಎ-12-ಕ್ಯೂ-0633 ರ ಬೈಕನ್ನು ಸವಾರ ರವಿ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹೇಶ್‍ ಎಂಬುವವರಿಗೆ ಡಿಕ್ಕಿಪಡಿಸಿದ ಪರಿಣಾಮ ಮಹೇಶ್ ಮತ್ತು ಬೈಕ್‍ ಸವಾರ ರವಿ ಗಾಯಗೊಂಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಕುಶಾಲನಗರ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

                ದಿನಾಂಕ: 03-02-2022 ರಂದು ಮಡಿಕೇರಿ ತಾಲ್ಲೂಕು ಮೇಕೇರಿ ಗ್ರಾಮದ ನಿವಾಸಿ ಶೇಕ್‍ ಹುಸೇನ್‍ ಎಂಬುವವರಿಗೆ ಅದೇ ಗ್ರಾಮದ ನಿವಾಸಿ ರಜಾಕ್‍ ಎಂಬುವವರು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿ ಗಾಯಪಡಿಸಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 04-02-2022 01:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080