ಅಭಿಪ್ರಾಯ / ಸಲಹೆಗಳು

ಎಟಿಎಂ ಕಾರ್ಡ್ ಬದಲಾವಣೆ ಮಾಡಿ ವಂಚನೆ ಪ್ರಕರಣ

                ದಿನಾಂಕ: 29-03-2021 ರಂದು ಸೋಮವಾರಪೇಟೆ ತಾಲ್ಲೂಕು ಚೌಡ್ಲು ಗ್ರಾಮದ ನಿವಾಸಿ ರಾಜು ಎಂಬುವವರು ಕುಶಾಲನಗರದ ಮೈಸೂರು ರಸ್ತೆಯಲ್ಲಿರುವ ಎಸ್‍ಬಿಐ ಎಟಿಎಂ ಕೇಂದ್ರದಲ್ಲಿ ಹಣ ಡ್ರಾ ಮಾಡುತ್ತಿರುವಾಗ ಯಾರೋ ಅಪರಿಚಿತ ವ್ಯಕ್ತಿಯೊಬ್ಬ ಹಿಂದಿನಿಂದ ಹೋಗಿ ಎಟಿಎಂ ಕಾರ್ಡ್‍ ಬದಲಾವಣೆ ಮಾಡಿ ₹. 1,15,700 ಹಣವನ್ನು ಬ್ಯಾಂಕ್‍ ಖಾತೆಯಿಂದ ತೆಗೆದು ಮೋಸ ಮಾಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಕೊಡಗು ಸೈಬರ್‍ ಅಪರಾಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಎಟಿಎಂ ಕಾರ್ಡ್ ಬದಲಾವಣೆ ಮಾಡಿ ವಂಚನೆ ಪ್ರಕರಣ

                ದಿನಾಂಕ: 29-03-2021 ರಂದು ಸೋಮವಾರಪೇಟೆ ತಾಲ್ಲೂಕು ಶಾಂತಳ್ಳಿ  ಗ್ರಾಮದ ನಿವಾಸಿ ಮೇದಪ್ಪ ಎಂಬುವವರು ಸೋಮವಾರಪೇಟೆ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಕರ್ಣಾಟಕ ಬ್ಯಾಂಕ್‍ ಎಟಿಎಂ ಕೇಂದ್ರದಲ್ಲಿ ಹಣ ಡ್ರಾ ಮಾಡುತ್ತಿರುವಾಗ ಯಾರೋ ಅಪರಿಚಿತ ವ್ಯಕ್ತಿಯೊಬ್ಬ ಹಿಂದಿನಿಂದ ಹೋಗಿ ಎಟಿಎಂ ಕಾರ್ಡ್‍ ಬದಲಾವಣೆ ಮಾಡಿ ₹. 1,91,891 ಹಣವನ್ನು ಬ್ಯಾಂಕ್‍ ಖಾತೆಯಿಂದ ತೆಗೆದು ಮೋಸ ಮಾಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಕೊಡಗು ಸೈಬರ್‍ ಅಪರಾಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

                ದಿನಾಂಕ: 30-03-2021 ರಂದು ಸೋಮವಾರಪೇಟೆ ತಾಲ್ಲೂಕು ಮಾದಾಪುರ ಗ್ರಾಮದ ಗ್ರಾಮದ ಬಳಿ ಅಯ್ಯಪ್ಪ ಎಂಬುವವರು ಅವರ ಸ್ಕೂಟರ್‍ ನಲ್ಲಿ ಹೋಗುತ್ತಿರುವಾಗ ದೀಪಕ್‍, ಹರೀಶ್‍, ವಿನೋದ್‍ , ಸೂರಜ್‍ ಎಂಬುವವರು ದಾರಿ ತಡೆದು ನಿಲ್ಲಿಸಿ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

                ದಿನಾಂಕ: 30-03-2021 ರಂದು ಸೋಮವಾರಪೇಟೆ ತಾಲ್ಲೂಕು ಮಾದಾಪುರ ಗ್ರಾಮದ ಗ್ರಾಮದ ಬಳಿ ದೀಪಕ್‍  ಎಂಬುವವರು ಅವರ ಸ್ಕೂಟರ್‍ ನಲ್ಲಿ ಹೋಗುತ್ತಿರುವಾಗ ಶ್ರೀನಾಥ್‍. ಸುನಿಲ್, ಶರಣ್‍, ಡಾಲ ಎಂಬುವವರು ದಾರಿ ತಡೆದು ನಿಲ್ಲಿಸಿ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮಾರಾಟಕ್ಕಾಗಿ ಲಾಟರಿ ಸಾಗಾಟ ಪ್ರಕರಣ

                ದಿನಾಂಕ: 31-03-2021 ರಂದು ವಿರಾಜಪೇಟೆ ಪಟ್ಟಣದಲ್ಲಿ ಅಕ್ರಮವಾಗಿ ಮಾರಾಟ ಮಾಡಲು ಕೇರಳ ರಾಜ್ಯದಿಂದ ಲಾಟರಿ ಟಿಕೇಟುಗಳನ್ನು ಕೆಎ-03-ಜೆಡ್‍-7236 ರ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ವಿರಾಜಪೇಟೆ ವೃತ್ತ ಸಿ.ಪಿ.ಐ ಶ್ರೀಧರ್‍ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಅಬೂಬಕರ್‍, ಚಂದ್ರ ಎಂಬುವವರ ವಿರುದ್ದ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.

ಹಲ್ಲೆ ಪ್ರಕರಣ

                ದಿನಾಂಕ: 30-03-2021 ರಂದು ಮಡಿಕೇರಿ ತಾಲ್ಲೂಕು ದೇವರಕೊಲ್ಲಿ ಮದೆನಾಡು ಗ್ರಾಮದ ನಿವಾಸಿಗಳಾದ ನಜೀರ್‍ ಮತ್ತು ಇತರರು ಹಾಗೂ ಜಾರ್ಜ್‍ ಮತ್ತು ಇತರರು ವೈಯಕ್ತಿಕ ಕಾರಣಕ್ಕೆ ಪರಸ್ಪರ ಹಲ್ಲೆ ಮಾಡಿ ಗಾಯಪಡಿಸಿ ಕೊಲೆ ಬೆದರಿಕೆ ಹಾಕಿದ್ದು ಈ ಬಗ್ಗೆ ಉಭಯ ಕಡೆಯವರು ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 01-04-2021 05:18 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ