Feedback / Suggestions

ಆಟೋ ರಿಕ್ಷಾ ಅಪಘಾತ

ದಿನಾಂಕ 3-7-2021ರಂದು ಪಿರಿಯಾಪಟ್ಟಣ ತಾಲ್ಲೂಕಿನ ದೊಡ್ಡಕಂಬ್ರಳ್ಳಿ ಗ್ರಾಮದ ಹೆಚ್.ಎಸ್. ದೀಪಕ್ ಎಂಬವರು ಕೀರ್ತಿ ಎಂಬವರ ಆಟೋ ರಿಕ್ಷಾದಲ್ಲಿ ಕುಶಾಲನಗರ ದಿಂದ  ತನ್ನ ಊರಾದ ದೊಡ್ಡಕಂಬ್ರಳ್ಳಿಗ್ರಾಮಕ್ಕೆ ಹೋಗುತ್ತಿದ್ದಾಗ ಕೂಡ್ಲೂರು ಗ್ರಾಮದ ಯೂನಿಯನ್ ಬ್ಯಾಂಕ್ ಮುಂಭಾಗ ಆಟೋ ರಿಕ್ಷಾ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲಿ ಮಗುಚಿ ಬಿದ್ದ ಪರಿಣಾಮ ಆಟೋ ರಿಕ್ಷಾದಲ್ಲಿದ್ದ ಹೆಚ್.ಎಸ್.ದೀಪಕ್ ಹಾಗು ಚಾಲಕ ಗಾಯಗೊಂಡಿದ್ದು, ಈ ಸಂಬಂಧ ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾರಿ ವಿಚಾರದಲ್ಲಿ ಜಗಳ

ನಾಪೋಕ್ಲು ಪೊಲೀಸ್ ಠಾಣಾ ಸರಹದ್ದಿನ ಕೋಕೇರಿ ಗ್ರಾಮದ ಕೆ.ಯು. ಸಾದಲಿ ಎಂಬವರು ದಿನಾಂಕ 3-7-2021 ರಂದು ತಮ್ಮ ತೋಟಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಅದೇ ಗ್ರಾಮದ ನಿಜಾಮುದ್ದೀನ್ ಹಾಗು ರುಕಿಯಾ ರವರುಗಳು ತೋಟಕ್ಕೆ ಹೋಗು ದಾರಿ ವಿಚಾರದಲ್ಲಿ ಜಗಳ ಮಾಡಿ ಹಲ್ಲೆ ನಡೆಸಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾಕ್‌ ಡೌನ್‌ ನಿಯಮ ಉಲ್ಲಂಘನೆ ಪ್ರಕರಣ

ದಿನಾಂಕ 3-7-2021 ರಂದು ಮೈಸೂರಿನ ದಗ್ಗಸಹಳ್ಳಿಯ ಅರ್ಜುನ್ ಹಾಗು ಮೂಸೂರಿನ ವಿದ್ಯಾರಣ್ಯಪುರಂ ನಿವಾಸಿ ಕೆ. ಚಂದನ್ ಎಂಬವರು ಕೋವಿಡ್‍-19 ಸಾಂಕ್ರಾಮಿಕ ರೋಗ ಹರಡುವಿಕೆ ತಡೆಗಟ್ಟಲು ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿ ಉಲ್ಲಂಘಿಸಿ ಸಾಂಕ್ರಾಮಿಕ ರೋಗ ಹರಡುವ ಸಂಭವವಿದ್ದರೂ ಸಹಾ  ನಿರ್ಲಕ್ಷ್ಯದಿಂದ ಕಾರಿನಲ್ಲಿ ಮೈಸೂರಿನಿಂದ ವಿರಾಜಪೇಟೆ ತಾಲೋಕಿನ ಕೆ.ಕೆ.ಆರ್. ಟೀ ಎಸ್ಟೇಟಿನ ವೀಕ್ಷಣೆಗೆ ಬಂದಿದ್ದು ಈ ಸಂಬಂಧ ಶ್ರೀಮಂಗಲ ಪೊಲೀಸ್ ಠಾಣಾಧಿಕಾರಿ ಕೆ.ಆರ್. ರವಿಶಂಕರ್ ರವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಲಾಕ್‌ ಡೌನ್‌ ನಿಯಮ ಉಲ್ಲಂಘನೆ ಪ್ರಕರಣ

ಕೋವಿಡ್‍-19 ಸಾಂಕ್ರಾಮಿಕ ರೋಗ ಹರಡುವಿಕೆ ತಡೆಗಟ್ಟಲು ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿ ಉಲ್ಲಂಘಿಸಿ ಸಾಂಕ್ರಾಮಿಕ ರೋಗ ಹರಡುವ ಸಂಭವವಿದ್ದರೂ ಸಹಾ ವಿರಾಜಪೇಟೆ ನಗರ ಠಾಣಾ ವ್ಯಾಪ್ತಿಯ ಕುಕ್ಲೂರು ಗ್ರಾಮದಲ್ಲಿ ವಿರಾಜಪೇಟೆ – ಮಡಿಕೇರಿ ಮುಖ್ಯ ರಸ್ತೆಯಲ್ಲಿರುವ ಸಲಾಂ ಎಂಬವರು ತಮ್ಮ ಹಾರ್ಡ್ ವೇರ್ ಅಂಗಡಿಯನ್ನು ತೆರೆದಿದ್ದು ಸದರಿ ಅಂಗಡಿಯಲ್ಲಿ ನಾಲ್ಕು ಜನ ಗ್ರಾಹಕರಿದ್ದು, ಇವರು ಸರಕಾರದ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದ್ದು  ಈ ಸಂಬಂಧ ವಿರಾಜಪೇಟೆ ಠಾಣಾಧಿಕಾರಿ ಜಗದೀಶ್ ದೂಳಶೆಟ್ಟಿರವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.

ವೃದ್ದೆಯ ಕೊಲೆ, ಪ್ರಕರಣ ದಾಖಲು

ಸೋಮವಾರಪೇಟೆ ಠಾಣಾ ಸರಹದ್ದಿನ ಮಣಜೂರು ಗ್ರಾಮದ ಮನೆಯಲ್ಲಿ 79 ವರ್ಷ ಪ್ರಾಯದ ಗೌರಮ್ಮ ಎಂಬವರು ಒಬ್ಬರೇ ವಾಸವಾಗಿದ್ದು ಅವರಿಗೆ ಸೇರಿದ ಆಸ್ತಿಯನ್ನು ರೂಡಿಮಾಡಿಕೊಂಡು ಜೀವನಸಾಗಿಸುತ್ತಿದ್ದು, ದಿನಾಂಕ 28-6-2021 ರಿಂದ 3-7-2021ರ ನಡುವಿನ ಅವಧಿಯಲ್ಲಿ ಯಾರೋ ವೃದ್ದೆಯ ಮನೆಗೆ ನುಗ್ಗಿ ಅವರ ಕೈಕಾಲುಗಳನ್ನು ಕಟ್ಟಿ ಅವರನ್ನು ಕೊಲೆಮಾಡಿ ಮನೆಯಿಂದ ಬೆಲೆಬಾಳುವ ವಸ್ತುಗಳನ್ನು ಹಾಗು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಸಂಬಂಧ ವೃದ್ಧೆಯ ಮೊಮ್ಮಗ  ಸೋಮವಾರಪೇಟೆ ತಾಲ್ಲೂಕಿನ ಬಾಣವಾರ ಗ್ರಾಮದ ಬಿ.ಕೆ. ರಾಕೇಶ್ ರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನವೋದಯ ಶಾಲೆಯಿಂದ  ಆಟದ ಸಾಮಾಗ್ರಿ ಕಳ್ಳತನ

ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ  ಜವಾಹರ್ ನಮೋದಯ ಶಾಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ದಿನಾಂಕ 21-4-2021 ರಿಂದ ಕೋವಿಡ್ ಕೇರ್ ಸೆಂಟರ್ ನಡೆಯುತ್ತಿದ್ದು, ಶಾಲೆಯ ಪ್ರಭಾರ ಪ್ರಾಂಶುಪಾಲರಾದ ಅರುಣ್ ಕುಮಾರ್ ತಿವಾರಿಯವರು ದಿನಾಂಕ 3-3-2021 ರಂದು ಶಾಲೆಗೆ ಖರೀದಿಸಿದ್ದ ಆಟದ ಸಾಮಾಗ್ರಿಗಳನ್ನು ಶಾಲೆಯ ಜಿಮ್ ಕೋಣೆಯಲ್ಲಿ ಇಟ್ಟು ಕೋಣೆಗೆ ಬೀಗವನ್ನು ಹಾಕಿರುವುದಾಗಿದ್ದು, ಸದರಿ ಕೋಣೆಯನ್ನು ದಿನಾಂಕ 30-6-2021 ರಂದು ಪರಿಶೀಲಿಸಿದಾಗ ಸದರಿ ಕೋಣೆಯಲ್ಲಿಟ್ಟಿದ್ದ ಸುಮಾರು 81,000/- ರೂ ಬೆಲೆಬಾಳುವ  ವಿವಿಧ ಆಟದ ಸಾಮಾಗ್ರಿಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿರುವುದು ಕಂಡುಬಂದಿದು, ಈ ಸಂಬಂಧ ಶಾಲೆಯ ಪ್ರಭಾರ ಪ್ರಾಂಶುಪಾಲರಾದ ಅರುಣ್ ಕುಮಾರ್ ತಿವಾರಿಯವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Last Updated: 04-07-2021 12:19 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Kodagu District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080