ಅಭಿಪ್ರಾಯ / ಸಲಹೆಗಳು

ದಾರಿ ತಡೆದು ಹಲ್ಲೆ, ಪ್ರಕರಣ ದಾಖಲು

ಸೋಮವಾರಪೇಟೆ ತಾಲ್ಲೂಕು ಶಾಂತಳ್ಳಿ ಗ್ರಾಮದ ಕೆ.ಸಿ. ಗುರುಪ್ರಸಾದ್ ಎಂಬವರು ದಿನಾಂಕ 9-9-2021 ರಂದು ಸಂಜೆ 9-00 ಗಂಟೆಯ ಸಮಯದಲ್ಲಿ ತನ್ನ ತಮ್ಮನೊಂದಿಗೆ  ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಅದೇ ಗ್ರಾಮದ ಅನಿಲ್ ಹಾಗೂ ಲಿಖಿತ್ ಎಂಬವರು ತಮ್ಮ ಕಾರಿನಲ್ಲಿ ಬಂದು ಕೆ.ಸಿ. ಗುರುಪ್ರಸಾದ್ ರವರನ್ನು ತಡೆದು ನಿಲ್ಲಿಸಿ ಹಳೇ ದ್ವೇಷದಿಂದ ಜಗಳ ಮಾಡಿದ್ದು ಅಲ್ಲದೆ ದೊಣ್ಣೆಯಿಂದ ಹಲ್ಲೆ ನಡೆಸಿ ನೋವನ್ನುಂಟು ಮಾಡಿದ್ದು,  ಜಗಳ ಬಿಡಿಸಲು ಬಂದ ಶರತ್ ಎಂಬವರಿಗೂ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾರೆಂದು ನೀಡಿದ ದೂರಿನ ಮೇರೆಗೆ ಸೋಮವಾಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬೈಕಿಗೆ ಪಿಕ್ಅಪ್ ವಾಹನ ಡಿಕ್ಕಿ

ದಿನಾಂಕ 8-9-2021 ರಂದು ಮದಲಾಪುರದ ನಿವಾಸಿ ರಾಜಶೇಖರ್ ಎಂಬವರು ತನ್ನ ಬಾಪ್ತು ಮೋಟಾರ್ ಸೈಕಲಿನಲ್ಲಿ ಕೂಡಿಗೆ-ಕೊಪ್ಪಲು ಗ್ರಾಮದ ಮುಖ್ಯ ರಸ್ತೆಯಲ್ಲಿ ಹೋಗುತ್ತಿದ್ದಾಗ ಕೆಎ-55-3998ರ ಪಿಕ್ ಅಪ್ ವಾಹನದ ಚಾಲಕ ಸದರಿ ವಾಹನವನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಾಜಶೇಖರ್ ರವರ ಮೋಟಾರ್ ಸೈಕಲ್ಗೆ ಡಿಕ್ಕಿಪಡಿಸಿದ ಪರಿಣಾಮ ರಾಜಶೇಖರ್ ರವರು ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದು, ಈ ಸಂಬಂಧ ವೈ.ಬಿ. ಮಾಚಯ್ಯ ಎಂಬವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಾರಿಗೆ ಆಂಬುಲೆನ್ಸ್ ವಾಹನ ಡಿಕ್ಕಿ

ದಿನಾಂಕ 11-9-2021 ರಂದು ಹಾಸನ ಜಿಲ್ಲೆಯ ಸಮಂತ್ ಹಾಗು ಅಭಿಷೇಕ್ ರವರು ಜಿಲ್ಲೆಗೆ ಪ್ರವಾಸಕ್ಕೆಂದು ಕಾರಿನಲ್ಲಿ ಬಂದು ಭಾಗಮಂಡಲ ಕಡೆಗೆ ಹೋಗಬೇಕಾದವರು ದಾರಿ ತಪ್ಪಿ ಮಂಗಳೂರು ರಸ್ತೆಯಲ್ಲಿ ಹೋಗುತ್ತಿದ್ದಾಗ ಸಂಪಾಜೆ ಚಡಾವು ಎಂಬಲ್ಲಿ ತಲುಪಿದಾಗ ಎದುರುಗಡೆಯಿಂದ ಬಂದ  ಆಂಬಯಲೆನ್ಸ್ ವಾಹನವೊಂದು ಸಮಂತ್ ಹಾಗು ಅಭಿಷೇಕ್ ರವರು ಹೋಗುತ್ತಿದ್ದ ಕಾರಿಗೆ ಡಿಕ್ಕಿಯಾದ ಪರಿಣಾಮ ಕಾರು ಜಖಂಗೊಂಡು ಕಾರಿನಲ್ಲಿದ್ದ ಅಭಿಷೇಕ್ ರವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 12-09-2021 12:20 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ