ಅಭಿಪ್ರಾಯ / ಸಲಹೆಗಳು

ಅತ್ಯಾಚಾರ ಆರೋಪಿಗೆ ಶಿಕ್ಷೆ

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೋಕು ಕೊಳ್ತೋಡು ಬೈಗೋಡು ಗ್ರಾಮದಲ್ಲಿ ಅಪ್ರಾಪ್ತೆ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ  ದಿನಾಂಕ 6-12-2018 ರಂದು ಮೊಕದ್ದಮೆ ದಾಖಲುಗೊಂಡಿದ್ದು,   ಪ್ರಕರಣದ ಆರೋಪಿಗೆ ವಿರಾಜಪೇಟೆ ಗೌರವಾನ್ವಿತ ಹೆಚ್ಚುವರಿ ಸತ್ರ ನ್ಯಾಯಾಲಯವು 20 ವರ್ಷ ಶಿಕ್ಷೆ ಹಾಗು ರೂ.30,000/- ದಂಡ ವಿಧಿಸಿರುತ್ತದೆ.  ಈ ಪ್ರಕರಣವನ್ನು  ವಿರಾಜಪೇಟೆ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ನಿರೀಕ್ಷಕರಾದ ಶ್ರೀ ಎನ್. ಕುಮಾರ ಆರಾದ್ಯ ರವರು ನಡೆಸಿ ದಿನಾಂಕ 20-12-2018 ರಂದು ನ್ಯಾಯಾಲಯಕ್ಕೆ ಅಂತಿಮ ವರದಿಯನ್ನು ಸಲ್ಲಿಸಿದ್ದರು.   ಈ ಪ್ರಕರಣದಲ್ಲಿ ಶ್ರೀ ಯಾಸಿನ್ ಅಹಮ್ಮದ್ . ಸರಕಾರಿ ಅಭಿಯೋಜಕರು ಗೌರವಾನ್ವಿತ 2 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿರಾಜಪೇಟೆ ಇವರು ವಾದವನ್ನು ಮಂಡಿಸಿದ್ದರು. 

            ಪ್ರಕರಣದ ಆರೋಪಿಗೆ ಶಿಕ್ಷೆಯಾಗುವಲ್ಲಿ ಕಾರಣಕರ್ತರಾದ ತನಿಖಾಧಿಕಾರಿ, ಸಹಾಯಕ ತನಿಖಾಧಿಕಾರಿ ಹಾಗು ನ್ಯಾಯಾಲಯದಲ್ಲಿ ವಾದವನ್ನು ಮಂಡಿಸಿದ ಸರಕಾರಿ ಅಭಿಯೋಜಕರ ಕಾರ್ಯವನ್ನು ಪ್ರಶಂಸಿಸಲಾಗಿದೆ.

ಜಾತಿ  ನಿಂದನೆ ಪ್ರಕರಣ ದಾಖಲು

 ಶ್ರೀಮಂಗಲ ಪೊಲೀಸ್ ಠಾಣಾ ಸರಹದ್ದಿನ ಬೆಳ್ಳೂರು ಗ್ರಾಮದ ಹೊಸಕೇರಿ ಪೈಸಾರಿಯಲ್ಲಿ ವಾಸವಾಗಿರುವ ಹೆಚ್.ಕೆ. ಹರೀಶ್  ಎಂಬವರು ದಿನಾಂಕ 2-9-2021 ರಂದು ತಮ್ಮ ಮನೆಯ ಕಡೆಗೆ ಹೋಗುತ್ತಿದ್ದಾಗ  ಅದೇ ರಸ್ತೆಯಲ್ಲಿ ಬಂದ  ಬಿ. ಬೋಪಣ್ಣ, ಬಿ. ರಾಜೇಶ್ ಮತ್ತು ಇಟ್ಟೀರ ಶಮ್ಮಿ ಎಂಬವರು ಓಮ್ನಿ ವಾಹನದಲ್ಲಿ ಬಂದು  ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 ಕಳ್ಳನೆಂದು ಬಾವಿಸಿ ಬಾಲಕನ ಮೇಲೆ ಹಲ್ಲೆ

 ದಿನಾಂಕ 2-9-2021 ರಂದು ಶ್ರೀಮಂಗಲ ಪೊಲೀಸ್ ಠಾಣಾ ಸರಹದ್ದಿನ ಶ್ರೀಕೃಷ್ಣ ದೇವಾಲಯದ ಹತ್ತಿರ  ಕೆಲವು ಸಾರ್ವಜನಿಕರು ಸೇರಿ  ಕಳ್ಳತನ ಮಾಡಲು ಬಂದ ಸಂದೇಹದಿಂದ  ಒಬ್ಬ ಬಾಲಕನನ್ನು ಹಿಡಿದು ಕಟ್ಟಿಹಾಕಿ ಹಲ್ಲೆ ನಡೆಸಿದ್ದು, ಈ ಸಂಬಂಧ ಶ್ರೀಮಂಗಲ ಠಾಣಾ ಸಿಬ್ಬಂದಿ ಎಂ.ಪಿ. ಉತ್ತಪ್ಪ ರವರು ಸದರಿ ಬಾಲಕನನ್ನು ಠಾಣೆಗೆ ಕರೆಸಿ ವಿಚಾರಿಸಿ ಬಾಲಕನ ಕೈಕಾಲು ಕಟ್ಟಿ ಅಮಾನವೀಯವಾಗಿ ಹಲ್ಲೆನಡೆಸಿದ ಬಗ್ಗೆ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

 

ಕೋವಿಡ್ ನಿಯಮ ಉಲ್ಲಂಘನೆ

 ದಿನಾಂಕ 2-9-2021 ರಂದು  ರಾತ್ರಿ 11-55 ಗಂಟೆಯ ಸಮಯದಲ್ಲಿ ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕೆದಮುಳ್ಳೂರು ಗ್ರಾಮದ ವಲ್ಲಭ್ ಎಂಬವರ ಮನೆಯ ಅಂಗಳದಲ್ಲಿ   ಆರೋಪಿಗಳಾದ  ಬೋಯಿಕೇರಿ ಗ್ರಾಮದ ಅಪ್ಪಯ್ಯ ಸಿ.ಯು ಹಾಗು ಇತರೆ 10 ಜನರು ಸೇರಿ  ಸಾಮಾಜಿಕ ಅಂತರವನ್ನು ಕಾಪಾಡದೆ ಗುಂಪು ಸೇರಿಕೊಂಡು ಪಾರ್ಟಿ ಮಾಡುತ್ತಿದ್ದು, ಜಿಲ್ಲೆಯಲ್ಲಿ ರಾತ್ರಿ 9-00 ಗಂಟೆಯಿಂದ ಬೆಳಗ್ಗೆ 5-00 ಗಂಟೆಯವರೆಗೆ ನೈಟ್ ಕರ್ಪ್ಯು ಇದ್ದರೂ ಸಹ ಕೋವಿಡ್ ನಿಯಮ ಉಲ್ಲಂಘಿಸಿದ್ದು ಇವರ ಮೇಲೆ ವಿರಾಜಪೇಟೆ ಗ್ರಾಮಾಂತರ ಠಾಣೆಯ ಪಿಎಸ್ಐ ಶ್ರೀಧರ್ ರವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.

ಕಾರುಗಳ ನಡುವೆ ಅಪಘಾತ

 ದಿನಾಂಕ 2-9-2021 ರಂದು ವಿರಾಜಪೇಟೆ ತಾಲೋಕು ಎಡಪಾಲ ಗ್ರಾಮದ ನಿವಾಸಿ C.H.Yahiya ಎಂಬವರು ತಮ್ಮ ಕಾರಿನಲ್ಲಿ ತಮ್ಮ ಕುಟುಂಬ ಸದಸ್ಯರೊಂದಿಗೆ  ವಿರಾಜಪೇಟೆಯಿಂದ ಎಡಪಾಲದ ಕಡೆಗೆ ಹೋಗುತ್ತಿದ್ದಾಗ   ಎಡಪಾಲದ ರಸ್ತೆಯಲ್ಲಿ  ಮಹಿಳೆಯೊಬ್ಬರು ತಮ್ಮ ಮನೆಯ ಗೇಟಿನ ಮೂಲಕ ತಮ್ಮ ಕಾರನ್ನು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದ ಪರಿಣಾಮ C.H.Yahiya ರವರು ಚಾಲನೆ ಮಾಡುತ್ತಿದ್ದ ಕಾರಿಗೆ ಡಿಕ್ಕಿಯಾಗಿದ್ದು, ಪರಿಣಾಮ ಎರಡೂ ಕಾರುಗಳು ಜಖಂಗೊಂಡಿದ್ದು ಮೂವರು ವ್ಯಕ್ತಿಗಳಿಗೆ ಗಾಯಗಳಾಗಿದ್ದು, ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ನವೀಕರಣ​ : 03-09-2021 12:11 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080