ಅಭಿಪ್ರಾಯ / ಸಲಹೆಗಳು

ಕಾರಿಗೆ ಕಂಟೈನರ್ ಲಾರಿ ಡಿಕ್ಕಿ:

ಕಾರಿಗೆ ಕಂಟೈನರ್ ಲಾರಿ ಡಿಕ್ಕಿಯಾಗಿ ಕಾರು ಜಖಂಗೊಂಡ ಘಟನೆ ಕುಶಾಲನಗರ ಪಟ್ಟಣದಲ್ಲಿ ನಡೆದಿದೆ.  ಕುಶಾಲನಗರ ಬಾಪೂಜಿ ಬಡಾವಣೆಯ ನಿವಾಸಿ ಹೆಚ್.ಎಸ್. ಧನುಷ್ ಎಂಬವರು ದಿನಾಂಕ 21-8-2021 ರಂದು ತಮ್ಮ ಕಾರಿಯಲ್ಲಿ ಕುಶಾಲನಗರದ ಮಾರ್ಟೆಟ್ ರಸ್ತೆಯ ವಿನಾಯಕ ಸ್ಟೀಲ್ ಅಂಗಡಿಯ ಮುಂದು ರಸ್ತೆಯಲ್ಲಿ ಹೋಗುತ್ತಿದ್ದಾಗ ಕಂಟೈನರ್ ಲಾರಿಯೊಂದು ಬಂದು ಕಾರಿಗೆ ಡಿಕ್ಕಿಯಾದ ಪರಿಣಾಮ ಕಾರು ಜಖಂಗೊಂಡಿರುವುದಾಗಿ ನೀಡಿದ ದೂರಿನ ಮೇರೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕೋವಿಡ್-19 ಮಾರ್ಗಸೂಚಿ ಉಲ್ಲಂಘನೆ, ಪ್ರಕರಣ ದಾಖಲು

ದಿನಾಂಕ 19-8-2021 ರಂದು ಕೊಡಗು ಜಿಲ್ಲಾ ಮಹಿಳಾ ಕಾಂಗ್ರೇಸ್ ಅಧ್ಯಕ್ಷರಾದ ಶ್ರೀಮತಿ ಸುರಯ್ಯ ಅಬ್ರಾರ್ ರವರ ಮುಂದಾಳತ್ವದಲ್ಲಿ ಕೇಂದ್ರ ಸರಕಾರದ ಅಡುಗೆ ಅನಿಲವನ್ನು ಏರಿಸುವುದನ್ನು ವಿರೋಧಿಸಿ ಮಡಿಕೇರಿ ನಗರದ ಇಂದಿರಾ ವೃತ್ತದಲ್ಲಿ ಸರಕಾರದ ಯಾವುದೇ ಅನುಮತಿಯನ್ನು ಪಡೆಯದೇ ಪ್ರತಿಭಟನೆಯನ್ನುನಡೆಸಿದ್ದು ಈ ಸಂಬಂಧ ಬಿ.ಆರ್. ಹರಿಣಿ, ಆರೋಗ್ಯ ನಿರೀಕ್ಷಕರು, ಸಿಎಂಸಿ ಮಡಿಕೇರಿ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕೋವಿಡ್-19 ಮಾರ್ಗಸೂಚಿ ಉಲ್ಲಂಘನೆ, ಪ್ರಕರಣ ದಾಖಲು

ದಿನಾಂಕ 20-8-2021 ರಂದು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಮಡಿಕೇರಿಯವರು ಬ್ಯಾಂಕಿನ ಶತಮಾನೋತ್ಸವ ಕಟ್ಟಡದ ಶಂಕು ಸ್ಥಾಪನೆ ಮತ್ತು ಶತಮಾನೋತ್ಸವ ಸಮಾರಂಭವನ್ನು ಹಮ್ಮಿಕೊಂಡಿದ್ದು ಈ ಬಗ್ಗೆ ಸದರಿ ಬ್ಯಾಂಕಿನ ಅದ್ಯಕ್ಷರಾದ ಕೊಡಂದೇರ ಪಿ. ಗಣಪತಿಯವರು ನಿಗದಿಪಡಿಸಿದ ಜನರಿಗಿಂತ ಹೆಚ್ಚಿನ ಜನರನ್ನು ಗುಂಪು ಸೇರಿಸಿ ಕೋವಿಡ್-10 ಮಾರ್ಗಸೂಚಿಯನ್ನು ಉಲ್ಲಂಘಿಸಿದ್ದು, ಈ ಸಂಬಂಧ ಬಿ.ಆರ್. ಹರಿಣಿ, ಆರೋಗ್ಯ ನಿರೀಕ್ಷಕರು, ಸಿಎಂಸಿ ಮಡಿಕೇರಿ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪಿಕ್ಅಪ್ ವಾಹನಕ್ಕೆ ಜೀಪು ಡಿಕ್ಕಿ

ದಿನಾಂಕ 21-8-2021 ರಂದು ಸುಳ್ಯನಗರದ ನಿವಾಸಿ ಲೋಕೇಶ ಎಂಬವರು ತನ್ನ ಪತ್ನಿ ಮತ್ತು ಮಗುವಿನೊಂದಿಗೆ ಮೋಟಾರ್ ಸೈಕಲಿನಲ್ಲಿ ಮಡಿಕೇರಿಯಿಂದ ಸುಳ್ಯದ ಕಡೆಗೆ ಹೋಗುತ್ತಿದ್ದಾಗ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ದೇವರಕೊಲ್ಲಿ ಎಂಬಲ್ಲಿ ಎದುರುಗಡೆಯಿಂದ ಜೀಪೊಂದು ಪಿಕ್ಅಪ್ ವಾಹನಕ್ಕೆ ಡಿಕ್ಕಿಯಾದ ಪರಿಣಾಮ ಎರಡೂ ವಾಹನಗಳು ಜಖಂಗೊಂಡಿದ್ದು ಲೋಕೇಶ ಮತ್ತು ಅವರ ಪತ್ನಿಗೆ ಗಾಯಗಳಾಗಿದ್ದು ಅಲ್ಲದೆ ಜೀಪಿನಲ್ಲಿದ್ದ ಚಾಲಕ ಮತ್ತು ಇನ್ನೊಬ್ಬ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 22-08-2021 11:36 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ