Feedback / Suggestions

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

ಸೋಮವಾರಪೇಟೆ ಠಾಣಾ ಸರಹದ್ದಿನ ತೋಳೂರು ಗ್ರಾಮದ ನಿವಾಸಿ ಜಗದೀಶ ಎಂಬವರ ತಂದೆ ಶಿವಯ್ಯ ಎಂಬವರು ಜೀವನದಲ್ಲಿ ಜುಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಚಿನ್ನಾಭರಣ ಕಳವು, ಪ್ರಕರಣ ದಾಖಲು

ನಾಪೋಕ್ಲು ಠಾಣಾ ಸರಹದ್ದಿನ ಕೋಣಜಗೇರಿ ಪಾರಾಣೆ ಗ್ರಾಮದ ಮಳ್ಳಡ ಪಿ. ನಾಚಪ್ಪ ಎಂಬವರು ಪಾರಾಣೆಯಲ್ಲಿರುವ ತಮ್ಮ ಅಣ್ಣ ಗಣೇಶ್ ಎಂಬವರ ಮನೆಯಯಲ್ಲಿರುವ ತಮಗೆ ಸೇರಿದ ಒಂದು ಕೋಣೆಯಲ್ಲಿ ಬೀರುವಿನಲ್ಲಿ  ತಮ್ಮ ಮಗಳ ಮದುವೆಗೆಂದು ಖರೀದಿಸಿ ಇಟ್ಟಿದ್ದ ರೂ.3,95,000 ರೂ ಮೌಲ್ಯದ  107.11 ಗ್ರಾಂ ತೂಕದ ಚಿನ್ನಾಭರಣವನ್ನು ದಿನಾಂಕ 7-11-2020 ರಂದು ಬೆಳಗ್ಗೆ 7-00 ಗಂಟೆಗೆ ತೆಗೆದು ನೋಡಿ ಮತ್ತೆ ಅಲ್ಲೇ ಇಟ್ಟಿದ್ದು ಬಳಿಕ 9-00 ಗಂಟೆಗೆ  ಬೀರುವನ್ನು ತೆರೆದು ನೋಡಿದಾಗ ಯಾರೋ ಸದರಿ ಚಿನ್ನಾಭರಣವನ್ನು ಕಳವು ಮಾಡಿರುವುದು ಕಂಡುಬಂದಿರುತ್ತದೆ ಎಂಬುದಾಗಿ ಎಂ.ಪಿ. ನಾಚಪ್ಪನವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಎರಡು ಬೈಕ್ ಗಳ ನಡುವೆ ಅಪಘಾತ

ಮಡಿಕೇರಿ ತಾಲೋಕು ಕತ್ತಲೆಕಾಡು ಕಡಗದಾಳು ಗ್ರಾಮದ ನಿವಾಸಿ ಶಾಂತಪ್ಪ ಎಂಬವರು ದಿನಾಂಕ 7-11-2020 ರಂದು ತಮ್ಮ ಬಾಪ್ತು ಸ್ಕೂಟಿನಲ್ಲಿ ಮಡಿಕೇರಿ ಕಡೆಗೆ ಹೋಗುತ್ತಿದ್ದಾದ ಎದುರುಗಡೆಯಿಂದ ಬಂದ ಮೋಟಾರ್ ಸೈಕಲ್ ಸವಾರ ಉದಯಕುಮಾರ್ ಎಂಬವರು ತಮ್ಮ ಮೋಟಾರ್ ಸೈಕಲನ್ನು ಡಿಕ್ಕಿಪಡಿಸಿದ ಪರಿಣಾಮ ಶಾಂತಪ್ಪನವರು ಗಾಯಗೊಂಡಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated: 08-11-2020 12:03 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Kodagu District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080