ಅಭಿಪ್ರಾಯ / ಸಲಹೆಗಳು

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಮೇಲೆ ಹಲ್ಲೆ

    ಮಡಿಕೇರಿ ನಗರ ಠಾಣಾ ಸರಹದ್ದಿನ ಪುಟಾಣಿನಗರದ ನಿವಾಸಿ ವೇಣುಗೋಪಾಲ್ ಎಂಬವರು ದಿನಾಂಕ 24-10-2020 ರಂದು  ತಮ್ಮ ಮನೆಯ ಬಳಿ ರಸ್ತೆಯ ಬದಿಯಲ್ಲಿ ತಮ್ಮ ವಾಹನವನ್ನು ನಿಲ್ಲಿಸಿ ತೊಳೆಯುತ್ತಿದ್ದ ಸಂದರ್ಭದಲ್ಲಿ ಸತ್ಯ ಎಂಬವರು ಸ್ವಿಪ್ಟ್ ಕಾರಿನಲ್ಲಿ ಬಂದು ವೇಣುಗೋಪಾಲ್  ರವರ ಕಾರಿಗೆ ಡಿಕ್ಕಿಪಡಿಸಿದ್ದು ಅಲ್ಲದೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ ಗಾಯಪಡಿಸಿ ಕೊಲೆ ಬೆದರಿಕೆ ಒಡ್ಡಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್ ಚಾಲಕನ ಮೇಲೆ ಹಲ್ಲೆಮಾಡಿ ಹಣ ಸುಲಿಗೆ.

    ದಿನಾಂಕ  24-10-2020 ರಂದು ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಬಿ. ರಾಜಶೇಖರ ಹಾಗು ನಿರ್ವಾಹಕ ಹೆಚ್.ಎಂ. ಯೋಗೇಶ್ ರವರು ಸಂಜೆ ಕರ್ತವ್ಯದಲ್ಲಿದ್ದು ಬಸ್ಸು ಕರಿಕೆ ಗ್ರಾಮದ ಎಳ್ಳುಕೊಚ್ಚಿಗೆ ತಲುಪುವಾಗ್ಗೆ ಕರಿಕೆ ಕಡೆಯಿಂದ ನಾಲ್ಕು ವ್ಯಕ್ತಿಗಳು ಸ್ವಿಪ್ಟ್ ಕಾರಿನಲ್ಲಿ ಬಂದು  ಬಸ್ಸ ನ್ನು ಅಡ್ಡಗಟ್ಟಿ ಕಾರಿಗೆ ದಾರಿಬಿಟ್ಟಿಲ್ಲ ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದು ಹೋಗಿದ್ದು, ನಂತರ ರಾತ್ರಿ 9-10 ಗಂಟೆಯ ಸಮಯದಲ್ಲಿ ಪಾರೆಷ್ಟ್ ಚೆಕ್ ಪೋಸ್ಟ್ ಬಳಿ ಬಸ್ ನ್ನು ತೊಳೆಯುತ್ತಿದ್ದಾಗ ಯಾರೋ ಇಬ್ಬರು ವ್ಯಕ್ತಿಗಳು ಹೀರೋ ಹೋಂಡಾ ಸ್ಕೂಟರಲ್ಲಿ ಬಂದು ಬಸ್ ಚಾಲಕ ಬಿ. ರಾಜಶೇಕರ ರವರ ಮೇಲೆ  ಹಲ್ಲೆ ಮಾಡಿದ್ದು  ಅಲ್ಲದೆ ಪ್ಯಾಂಟಿನ ಜೇಬಿನಿಂದ ರೂ.1850/-ಗಳನ್ನು ತೆಗೆದುಕೊಂಡು ಪರಾರಿಯಾಗಿದ್ದು ಮತ್ತೆ 20 ನಿಮಿಷಗಳ ಬಳಿಕ 10-15 ಜನರ ಗುಂಪನ್ನು ಕಟ್ಟಿಕೊಂಡು ಬಂದು ಹಲ್ಲೆಗೆ ಯತ್ನಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸ್ಕೂಟಿಗೆ ವ್ಯಾನ್ ಡಿಕ್ಕಿ ಮೂವರಿಗೆ ಗಾಯ

ಮಡಿಕೇರಿ ತಾಲೋಕು ಎಮ್ಮೆಮಾಡು ಗ್ರಾಮದ ನಿವಾಸಿ ಸಿ.ಪಿ.ಹಂಸ ಎಂಬವರು ತಮ್ಮ ಸೊಸೆ ಮಿಶ್ರೀತಾ  ಆಕೆಯ 11 ತಿಂಗಳ ಹೆಣ್ಣು ಯೊಂದಿಗೆ ವಿರಾಜಪೇಟೆ ಸಮೀಪದ ಕೊಮ್ಮೆತೋಡು ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಮಾರುತಿ ವ್ಯಾನ್ ಡಿಕ್ಕಿಯಾದ ಪರಿಣಾಮ ಮೂವರು ಸ್ಕೂಟಿಯಿಂದ ಕೆಳಗೆ ಬಿದ್ದು ಗಾಯಗೊಂಡಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನೀರಿನಲ್ಲಿ ಮುಳುಗಿ ಇಬ್ಬರ ದುರ್ಮರಣ

    ಸೋಮವಾರಪೇಟೆ ತಾಲೋಕು ಬಿಳಿಗೇರಿ ಗ್ರಾಮದ ಮಾದಪುರ ನಿವಾಸಿ ಬಿ.ಸಿ. ಮೊಣ್ಣಪ್ಪ ಎಂಬವರ ತಮ್ಮ ಬಿ.ಸಿ. ನಂಜಪ್ಪ ಎಂಬವರು ತಮ್ಮ ಕುಟುಂಬದವರೊಂದಿಗೆ ತಮ್ಮ ತೋಟಕ್ಕೆ ಹೋಗಿದ್ದ ಸಂದರ್ಭದಲ್ಲಿ ಬಿ.ಸಿ. ಮೊಣ್ಣಪ್ಪನವರ ಮಗ 11 ವರ್ಷದ ನಿರೋಸ್ ಎಂಬವನು ತೋಟದ ಪಕ್ಕದಲ್ಲಿದ್ದ ನಂದಿಮೊಟ್ಟೆ  ಹೊಳಗೆ ಕೈಕಾಲು ತೊಳೆಯಲು ಹೋಗಿ ಕಾಲು ಜಾರಿ ನೀರಿಗೆ ಬಿದ್ದಿದ್ದು ಆತನನ್ನು ರಕ್ಷಿಸಲು ಹೋದ ಬಿ.ಸಿ. ನಂಜಪ್ಪನವರು ಸಹ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದು, ಈ ಸಂಬಂಧ ಸೋಮವಾಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 26-10-2020 12:52 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ