ಅಭಿಪ್ರಾಯ / ಸಲಹೆಗಳು

ದಾರಿ ತಡೆದು ಕರ್ತವ್ಯಕ್ಕೆ ಅಡ್ಡಿ

ವಿರಾಜಪೇಟೆ ತಾಲೋಕು ಕೆ.ಬಾಡಗ ಗ್ರಾಮದಲ್ಲಿ ವಾಸವಾಗಿರುವ ಆಶಾ ಕಾರ್ಯಕರ್ತೆ ಶ್ರೀಮತಿ ಕೆ.ಎಸ್. ವಾಣಿ ಎಂಬವರು ದಿನಾಂಕ 21-5-2021 ರಂದು ಕೆ.ಬಾಡಗ ಗ್ರಾಮದಲ್ಲಿ ಕೋವಿಡ್ ಪಾಸಿಟಿವ್ ರೋಗಿಗಳ ತಪಾಸಣೆಗಾಗಿ ಹೋಗಿದ್ದು ಸದರಿ ಗ್ರಾಮದ ಕರ್ಚಿ ಎಂಬಲ್ಲಿ ವಾಸವಾಗಿರುವ ಕೊಳೇರ ವಿನೋದ್ ಹಾಗು ಅವರ ಪತ್ನಿಯವರಿಗೆ ಕೋವಿಡ್ ಪಾಸಿಟಿವ್ ಇದ್ದ ಕಾರಣ  ತಪಾಸಣೆಗಾಗಿ ವಿಲೇಜ್ ನರ್ಸ್, ಕೆ.ಬಾಡಗ ಗ್ರಾಮದ ಪಿಡಿಒ, ಗ್ರಾಮ ಲೆಕ್ಕಿಗ ರವರೊಂದಿಗೆ ಹೋದ ಸಂದರ್ಭದಲ್ಲಿ  ಶ್ರೀಮತಿ ಕೆ.ಎಸ್. ವಾಣಿರವರನ್ನು ಕೊಟ್ಟಂಗಡ ರಾಮು ಕರುಂಬಯ್ಯ ಮತ್ತು ಅವರ ಪತ್ನಿ ದೀನಾ ರವರು ಏಕಾಎಕಿ ದಾರಿ ತಡೆದು ಹಳೆಯ ದ್ವೇಷದಿಂದ ಅವಾಚ್ಯ ಶಬ್ದಗಳಿಂದ ಬೈದು ತಳ್ಳಿ ಹಾಕಿದ್ದು ಕರ್ತವ್ಯಕ್ಕೆ ತಡೆ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ

ಕುಟ್ಟ ಠಾಣಾ ವ್ಯಾಪ್ತಿಯ ಕೆ. ಬಾಡಗ ಗ್ರಾಮದ ನಿವಾಸಿ ಪ್ರವೀಣ್ ಎಂಬವರು ದಿನಾಂಕ 22-5-2021 ರಂದು ಸ್ನೇಹಿತ ದರ್ಶನ್ ರವರೊಂದಿಗೆ ಸಮಯ ಸಂಜೆ 7-00 ಗಂಟೆಯ ಸಮಯದಲ್ಲಿ  ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ನಾಣಚ್ಚಿ ಗ್ರಾಮದ ನಿವಾಸಿಗಳಾದ ವಿಷ್ಣುಪ್ರಸಾದ್, ಶ್ರೀಕಾಂತ್ ಮತ್ತು ಸಂತೋಷ್ ರವರುಗಳು ಪ್ರವೀಣ್ ರವರ ದಾರಿ ತಡೆದು ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಠಾಣೆಗೆ ದೂರು ನೀಡಿದ ವಿಚಾರದಲ್ಲಿ ಹಲ್ಲೆ ನಡೆಸಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 23-05-2021 03:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ