ಅಭಿಪ್ರಾಯ / ಸಲಹೆಗಳು

ಸುಲಿಗೆ ಪ್ರಕರಣ ಪತ್ತೆ, ಆರೋಪಿಗಳ ಬಂಧನ.

      ಗೋಣಿಕೊಪ್ಪ ಠಾಣಾ ಸರಹದ್ದಿನ ಧನುಗಾಲ ಗ್ರಾಮದಲ್ಲಿ ನಡೆದಿದ್ದ ಸುಲಿಗೆ ಪ್ರಕರಣದಲ್ಲಿ ಗೋಣಿಕೊಪ್ಪ ಸಿಪಿಐ ಮತ್ತು ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಆರೋಪಿಗಳಿಂದ ₹. 35,200 ನಗದು, 2 ಮೊಬೈಲ್‌ ಫೋನ್‌ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಬೈಕ್‌ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

            ದಿನಾಂಕ: 01-11-2021 ರಂದು ರಾತ್ರಿ ಧನುಗಾಲ ಗ್ರಾಮದ ನಿವಾಸಿ ನಾರಾಯಣಪ್ಪ ಮತ್ತು ಅವರ ತಂಗಿ ಮನೆಯಲ್ಲಿರುವಾಗ ರಾತ್ರಿ 9-30 ರ ಸಮಯದಲ್ಲಿ ಪೊಲೀಸರ ಸೋಗಿನಲ್ಲಿ ಮನೆಗೆ ಬಂದ ಅಪರಿಚಿತ ವ್ಯಕ್ತಿಗಳು ಸಾರಾಯಿ ಮಾರಾಟದ ಬಗ್ಗೆ ಆರೋಪ ಮಾಡಿ ಫೋಟೊ ತೆಗೆದು ಪೊಲೀಸ್‌ ಠಾಣೆಗೆ ಹೋಗಲು ತಿಳಿಸಿ ಬಲವಂತವಾಗಿ ನಾರಾಯಣಪ್ಪ ರವರಿಂದ 60 ಸಾವಿರ ನಗದು ಮತ್ತು 2 ಮೊಬೈಲ್‌ ಫೋನ್‌ ಗಳನ್ನು ಕಿತ್ತುಕೊಂಡು ಬೈಕ್‌ನಲ್ಲಿ ಹೋಗಿದ್ದು ಈ ಬಗ್ಗೆ ತಕ್ಷಣ ನಾರಾಯಣಪ್ಪ ರವರು ಪೊಲೀಸ್‌ ಸಹಾಯವಾಣಿ 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿ , ಗೋಣಿಕೊಪ್ಪ ಠಾಣೆಯಲ್ಲಿ ನೀಡಿದ ಪುಕಾರಿನ ಮೇರೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

            ಪ್ರಕರಣದ ತನಿಖೆ ಕೈಗೊಂಡ ಸಿಪಿಐ ಗೋಣಿಕೊಪ್ಪ ವೃತ್ತ ಮತ್ತು ಅವರ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ ದಿನಾಂಕ 02-11-2021 ರಂದು ಆರೋಪಿಗಳಾದ  ಕೆ.ಎಂ.ಸೋನಾ @ ಚೇತನ್ ತಂದೆ:ಮೊಣ್ಣಪ್ಪ, ಪ್ರಾಯ 28 ವರ್ಷ, ಕೂಲಿ ಕೆಲಸ, ವಾಸ:ವಾಟರ್ ಟ್ಯಾಂಕ್ ಹತ್ತಿರ,ಕಿರುಗೂರು ಗ್ರಾಮ, ಪೊನ್ನಂಪೇಟೆ ತಾಲ್ಲೂಕು. ಮತ್ತು ಎಂ.ಎಸ್.ಪ್ರತಾಪ್ @ ಪಾಪಣ್ಣ ತಂದೆ:ಎಂ.ಟಿ.ಸೋಮಶೇಖರ್, ಪ್ರಾಯ 26 ವರ್ಷ, ಹೊನ್ನಿಕೊಪ್ಪ ಕಾಲೋನಿ, ಕಿರುಗೂರು ಗ್ರಾಮ, ಪೊನ್ನಂಪೇಟೆ ತಾಲ್ಲೂಕು. ಎಂಬುವವರನ್ನು ದಸ್ತಗಿರಿ ಮಾಡಿ ಆರೋಪಿತರು ಸುಲಿಗೆ ಮಾಡಿದ್ದ ₹. 35200/- ನಗದು ಹಣ, ಕೃತ್ಯಕ್ಕೆ ಬಳಸಿದ್ದ ನಂ. ಕೆಎ-12 ಕ್ಯೂ-9111 ಯಮಹಾ ಆರ್.ಟಿ.ಆರ್ ಬೈಕ್, ಎರಡು ಮೊಬೈಲ್ ಫೋನ್ ಸೇರಿ ಒಟ್ಟು ರೂ.1,15,200/- ಮೌಲ್ಯದ ಸ್ವತ್ತುಗಳನ್ನು  ವಶಪಡಿಸಿಕೊಂಡಿರುತ್ತಾರೆ.

ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ವಿರಾಜಪೇಟೆ ಪೊಲೀಸ್ ಉಪ-ಅಧೀಕ್ಷಕರಾದ  ಸಿ.ಟಿ.ಜಯಕುಮಾರ್ ರವರ ಮಾರ್ಗದರ್ಶನದಲ್ಲಿ ಗೋಣಿಕೊಪ್ಪ ವೃತ್ತ ನಿರೀಕ್ಷಕರಾದ ಎಸ್.ಎನ್. ಜಯರಾಮ್, ಎಎಸ್ಐ ಸುಬ್ರಮಣಿ, ಎಎಸ್ಐ ದೇವರಾಜು ಹಾಗೂ ಸಿಬ್ಬಂದಿಯವರಾದ ಪಿ.ಎ.ಮಹಮದ್ ಅಲಿ, ಎಂ.ಡಿ.ಮನು, ಅಬ್ದುಲ್ ಮಜೀದ್, ಸುರೇಂದ್ರ, ಮಹೇಂದ್ರ, ಹರೀಶ್, ಕೃಷ್ಣಮೂರ್ತಿ, ಲೋಕೇಶ್ ಮತ್ತು ಬಷೀರ್ ವರು ಭಾಗವಹಿಸಿರುತ್ತಾರೆ.‌ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಲಾಗಿದೆ.

ರಸ್ತೆ ಅಪಘಾತ ಪ್ರಕರಣ

            ದಿನಾಂಕ; 02-11-2021 ರಂದು ಪೊನ್ನಂಪೇಟೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಕೆಎ-12-ಆರ್‌-6875 ರ ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನಾಗರಾಜು ಎಂಬುವವರಿಗೆ ಡಿಕ್ಕಿಪಡಿಸಿದ ಪರಿಣಾಮ ಬಿದ್ದು ಗಾಯಗೊಂಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಪೊನ್ನಂಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 03-11-2021 11:57 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080