ಅಭಿಪ್ರಾಯ / ಸಲಹೆಗಳು

ಅಕ್ರಮ ಬೀಟಿಮರ ಪತ್ತೆ ಕೇರಳ ರಾಜ್ಯದ ಆರೋಪಿ ಬಂಧನ:
 
ದಿನಾಂಕ 13-5-2021 ರಂದು ಬೆಳಗ್ಗೆ ವಿರಾಜಪೇಟೆ ಸಮೀಪದ ಕದನೂರು ಬಳಿ ಕೇರಳ ನೋಂದಣಿ ಸಂಖ್ಯೆಯ ಪಿಕಪ್ ವಾಹನ ಕೆಎಲ್-17 ಹೆಚ್ 3567ರಲ್ಲಿ ಕೇರಳ ರಾಜ್ಯದ ವ್ಯಕ್ತಿಯೋರ್ವ ಅಕ್ರಮವಾಗಿ ಬೀಟಿ ಮರದ ತುಂಡುಗಳನ್ನು ಕೇರಳ ರಾಜ್ಯಕ್ಕೆ ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ವರ್ತಮಾನದ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ದಾಳಿ ಮಾಡಿ ಆರೋಪಿ ಪಿ.ಪಿ. ಅನಾಸ್, 36 ವರ್ಷ, ತಂದೆ ಹಸೈನಾರ್, ವಾಸ- ಪಾಲಕ್ ಪರಂಬು ಹೌಸ್, ಮಲಪರಂಬು ಜಿಲ್ಲೆ, ಕೇರಳ ರಾಜ್ಯ ಈತನಿಂದ ಅಂದಾಜು 2 ಲಕ್ಷ ಮೌಲ್ಯದ 5 ಬೀಟಿ ಮರದ ತುಂಡುಗಳನ್ನು ಹಾಗು ವಾಹನವನ್ನು ವಶಕ್ಕೆ ಪಡೆದಿರುತ್ತಾರೆ. ಬಂಧಿತನು ಕರಡ ಗ್ರಾಮದ ಪಿ. ಬೋಪಣ್ಣ ಎಂಬವರ ತೋಟದಿಂದ ಕೊಳಕೇರಿ ನಿವಾಸಿ ಆಪು ಎಂಬವನೊಂದಿಗೆ ಜೊತೆ ಸೇರಿ ಅಕ್ರಮವಾಗಿ ಬೀಟಿ ಮರಗಳನ್ನು ಕಟಾವು ಮಾಡಿ ಕೇರಳ ರಾಜ್ಯದ ಕೊಚ್ಚಿನ್ ಗೆ ಸಾಗಾಟ ಮಾಡುವುದಾಗಿ ವಿಚಾರಣೆಯಿಂದ ತಿಳಿದುಬಂದಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.
 
ಕಾರ್ಯಾಚರಣೆಯು ವಿರಾಜಪೇಟೆ ಡಿವೈಎಸ್ಪಿ ಸಿ.ಟಿ. ಜಯಕುಮಾರ್ ಮತ್ತು ವಿರಾಜಪೇಟೆ ವೃತ್ತ ನಿರೀಕ್ಷಕರಾದ ಬಿ.ಎಸ್.ಶ್ರೀಧರ್ ರವರ ನೇತೃತ್ವದಲ್ಲಿ ನಡೆದಿದ್ದು ಕಾರ್ಯಾಚರಣೆಯಲ್ಲಿ ವಿರಾಜಪೇಟೆ ಗ್ರಾಮಾಂತರ ಠಾಣಾ ಪ್ರಭಾರ ಪಿಎಸ್ಐ ಹೆಚ್.ಎಸ್. ಬೋಜಪ್ಪ, ಎಎಸ್ಐ ಸಿ.ವಿ. ಶ್ರೀಧರ್, ಸಿಬ್ಬಂದಿಗಳಾದ ತೀರ್ಥಕುಮಾರ್, ನೆಹರುಕುಮಾರ್, ಸುಕುಮಾರ್, ರಾಮಣ್ಣ, ಪ್ರದೀಪ್ ಮತ್ತು ಕಾರ್ತಿಕ್ ರವರುಗಳು ಭಾಗಿಯಾಗಿದ್ದರು.
May be an image of 4 people, people standing, outdoors and text that says "ವಿರಾಜಪೇಟ ಗ್ರಾಮಾಂತರಪೊಲೀಸ್ ಪೊಲೀಸ್ ರಾಣ"
ಗೋಹತ್ಯೆ, ಪ್ರಕರಣ ದಾಖಲು

ದಿನಾಂಕ 12-5-2021 ರಂದು XAVIER C K, ಬಾಡಗ ಬಾಣಂಗಾಲ ಗ್ರಾಮ ರವರ ಬಾಪ್ತು ಹಸುವನ್ನು ಎಂದಿನಂತೆ ಮೇಯಲು ಬಿಟ್ಟಿದ್ದು ವಾಪಾಸು ಬಾರದೇ ಇದ್ದುದರಿಂದ ಹಸುವನ್ನು ಹುಡುಕಿಕೊಂಡು ಹೋಗುವಾಗ ಬಿ.ಬಿ.ಟಿ.ಸಿ. ಕಾಫಿ ತೋಟದೊಳಗೆ ಸದರಿ ಹಸುವಿನ ಚರ್ಮ ಹಾಗು ಇತರೆ  ಶರೀರದ ಒಳಗಿನ ಭಾಗಗಳು ಇರುವುದು ಕಂಡುಬಂದಿದ್ದು, ಸದರಿ ಹಸುವನ್ನು ಯಾರೋ ಹಿಡಿದು ಹತ್ಯೆಮಾಡಿ ಮಾಂಸಮಾಡಿರಬಹುದಾಗಿಯೂ ಸದರಿ ಹಸುವಿನ ಬಿಲೆ ಸುಮಾರು 30,000 ರೂ. ಗಳಾಗುತ್ತವೆ ಎಂದು  ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮದುವೆಯಾಗಲು ಅಡ್ಡಿ ಕೊಲೆ ಬೆದರಿಕೆ

ಎಂ.ಎಂ. ತಿಮ್ಮಯ್ಯ ಎಂಬವರು ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದು ಲಾಕ್ಡೌನ್ ಸಂಬಂಧ ತನ್ನ ಊರಾದ ವಿರಾಜಪೇಟೆ ತಾಲೋಕಿನ ಕೆಮುಳ್ಳೂರು ಗ್ರಾಮದಲ್ಲಿರುವ ತಮ್ಮ ಮನೆಗೆ ತಾನು ಮದುವೆಯಾಗಲಿರುವ  ಹುಡುಗಿಯನ್ನು ಜೊತೆಗೆ ಕರೆದುಕೊಂಡು ಬಂದಿದ್ದು, ತಾಯಿಯ ಒಪ್ಪಿಗೆ ಪಡೆದು ಮದುವೆಯಾಗಲು ಇಚ್ಚಿಸಿರುವುದಾಗಿದೆ.  ದಿನಾಂಕ 12-5-2021 ರಂದು ಈ ವಿಚಾರದಲ್ಲಿ ಆರೋಪಿ ಪರಮೇಶ ರವರು ಅಡ್ಡಿಪಡಿಸಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡಿರುತ್ತಾರೆಂದು ಫಿರ್ಯಾದಿ ಎಂ.ಎಂ. ತಿಮ್ಮಯ್ಯ ರವರು ನೀಡಿದ ದೂರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ನವೀಕರಣ​ : 14-05-2021 04:35 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೊಡಗು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080